ಕರ್ನಾಟಕ

karnataka

ETV Bharat / bharat

JEE mains 2021 Result: ಕರ್ನಾಟಕದ ಗೌರಬ್ ದಾಸ್​ ಸೇರಿ 18 ಮಂದಿಗೆ ಮೊದಲ ರ‍್ಯಾಂಕ್ - 44 ಅಭ್ಯರ್ಥಿಗಳಿಗೆ ಶೇ 100ರಷ್ಟು ಫಲಿತಾಂಶ

ಈ ವರ್ಷದಿಂದ ಜೆಇಇ ಮೈನ್ ಪರೀಕ್ಷೆಯನ್ನು ವಿದ್ಯಾರ್ಥಿಗಳಿಗೆ ನಮ್ಯತೆ ಮತ್ತು ಅವರ ಅಂಕಗಳನ್ನು ಸುಧಾರಿಸುವ ಅವಕಾಶವನ್ನು ನೀಡುವುದಕ್ಕಾಗಿ ವರ್ಷಕ್ಕೆ ನಾಲ್ಕು ಬಾರಿ ನಡೆಲಾಗುತ್ತಿದೆ. ಮೊದಲ ಹಂತವನ್ನು ಫೆಬ್ರವರಿಯಲ್ಲಿ ಮತ್ತು ಎರಡನೇ ಹಂತವನ್ನು ಮಾರ್ಚ್‌ನಲ್ಲಿ ನಡೆಸಲಾಗಿತ್ತು. ಉಳಿದ 2 ಹಂತ ಏಪ್ರಿಲ್​ ಮತ್ತು ಮೇನಲ್ಲಿ ನಡೆಯಬೇಕಿತ್ತಾದರೂ ಕೊರೊನಾ ಕಾರಣ ಮುಂದೂಡಲಾಗಿತ್ತು. ಹಾಗಾಗಿ 3ನೇ ಹಂತದ ಪರೀಕ್ಷೆ ಜುಲೈನಲ್ಲಿ ಮತ್ತು 4ನೇ ಹಂತದ ಪರೀಕ್ಷೆ ಆಗಸ್ಟ್​ 26 ರಿಂದ ಸೆಪ್ಟೆಂಬರ್​ 2ರವರೆಗೆ ನಡೆದಿತ್ತು.

JEE mains 2021 Result
ಇಇ-ಮುಖ್ಯ ಪರೀಕ್ಷೆಯ ನಾಲ್ಕನೇ ಆವೃತ್ತಿಯ ಫಲಿತಾಂಶ

By

Published : Sep 15, 2021, 3:47 AM IST

​ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಎಂಜಿನಿಯರಿಂಗ್ ಕೋರ್ಸ್​ಗೆ ಪ್ರವೇಶ ಪರೀಕ್ಷೆಯಾದ ಜೆಇಇ-ಮುಖ್ಯ ಪರೀಕ್ಷೆಯ ನಾಲ್ಕನೇ ಆವೃತ್ತಿಯ ಫಲಿತಾಂಶ ಬಿಡುಗಡೆ ಮಾಡಿದ್ದು,ಒಟ್ಟು 44 ಮಂದಿ ಶೇಕಡಾ ನೂರರಷ್ಟು ಫಲಿತಾಂಶ ಪಡೆದಿದ್ದರೆ, ಕರ್ನಾಟಕದ ಗೌರಬ್ ದಾಸ್​​ ಸೇರಿ ಒಟ್ಟು 18 ಅಭ್ಯರ್ಥಿಗಳು ಅಗ್ರ ಶ್ರೇಯಾಂಕವನ್ನು ಹಂಚಿಕೊಂಡಿದ್ದಾರೆ.

ಮಂಗಳವಾರ ಮಧ್ಯರಾತ್ರಿ ಫಲಿತಾಂಶ ಬಿಡುಗಡೆ ಮಾಡಿರುವ ಎನ್​ಟಿಎ ಅಭ್ಯರ್ಥಿಗಳು ಬುಧವಾರ ಬೆಳಿಗ್ಗೆ 3 ಗಂಟೆಯ ನಂತರ ವೆಬ್​ಸೈಟ್​​ನಲ್ಲಿ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದು ಎಂದು ತಿಳಿಸಿದೆ.

ಕರ್ನಾಟಕದ ಗೌರಬ್ ದಾಸ್, ಬಿಹಾರದ ವೈಭವ ವಿಶಾಲ್,ಆಂಧ್ರಪ್ರದೇಶದ ಕರ್ಣಮ್ ಲೋಕೇಶ್, ದುಗ್ಗಿನೇನಿ ವೆಂಕಟ ಪನೀಶ್, ಪಸಾಲ ವೀರ ಶಿವ ಮತ್ತು ಕಾಂಚನಪಲ್ಲಿ ರಾಹುಲ್ ನಾಯ್ಡು, , ರಾಜಸ್ಥಾನದ ಅನ್ಶುಲ್ ವರ್ಮಾ ಮತ್ತು ಮೃದಲ್ ಅಗರ್ವಾಲ್, ದೆಹಲಿಯ ರುಚಿರ್ ಬನ್ಸಾಲ್ ಮತ್ತು ಕಾವ್ಯ ಚೋಪ್ರಾ, ಉತ್ತರ ಪ್ರದೇಶದ ಅಮೈಯಾ ಸಿಂಘಾಲ್ ಮತ್ತು ಪಾಲ್ ಅಗರ್ವಾಲ್, ತೆಲಂಗಾಣದ ಕೊಮ್ಮ ಶರಣ್ಯ ಮತ್ತು ಜೋಷ್ಯುಲ ವೆಂಕಟ ಆದಿತ್ಯಾ,ಮಹರಾಷ್ಟ್ರದ ಅಥರ್ವ ಅಭಿಜಿತ್ ಟಾಂಬಾಟ್​, ಪಂಜಾಬ್​ನ ಪುಲಕಿತ್ ಗೋಯಲ್ ಹಾಗೂ ಚಂಡೀಗಡದ ಗುರಮ್ರಿತ್ ಸಿಂಗ್ ಅಗ್ರ ಶ್ರೇಯಾಂಕ ಪಡೆದುಕೊಂಡಿದ್ದಾರೆ.

ಜೆಇಇ ಟಾಪರ್ಸ್​

ಈ ವರ್ಷದಿಂದ ಜೆಇಇ ಮೈನ್ ಪರೀಕ್ಷೆಯನ್ನು ವಿದ್ಯಾರ್ಥಿಗಳಿಗೆ ನಮ್ಯತೆ ಮತ್ತು ಅವರ ಅಂಕಗಳನ್ನು ಸುಧಾರಿಸುವ ಅವಕಾಶವನ್ನು ನೀಡುವುದಕ್ಕಾಗಿ ವರ್ಷಕ್ಕೆ ನಾಲ್ಕು ಬಾರಿ ನಡೆಲಾಗುತ್ತಿದೆ. ಮೊದಲ ಹಂತವನ್ನು ಫೆಬ್ರವರಿಯಲ್ಲಿ ಮತ್ತು ಎರಡನೇ ಹಂತವನ್ನು ಮಾರ್ಚ್‌ನಲ್ಲಿ ನಡೆಸಲಾಗಿತ್ತು. ಉಳಿದ 2 ಹಂತ ಏಪ್ರಿಲ್​ ಮತ್ತು ಮೇನಲ್ಲಿ ನಡೆಯಬೇಕಿತ್ತಾದರೂ ಕೊರೊನಾ ಕಾರಣ ಮುಂದೂಡಲಾಗಿತ್ತು. ಹಾಗಾಗಿ 3ನೇ ಹಂತದ ಪರೀಕ್ಷೆ ಜುಲೈನಲ್ಲಿ ಮತ್ತು 4ನೇ ಹಂತದ ಪರೀಕ್ಷೆ ಆಗಸ್ಟ್​ 26 ರಿಂದ ಸೆಪ್ಟೆಂಬರ್​ 2ರವರೆಗೆ ನಡೆದಿತ್ತು.

ಈಗಾಗಲೇ ಜಾರಿಗೆ ತಂದಿರುವ ನೀತಿಗೆ ಅನುಗುಣವಾಗಿ ನಾಲ್ಕು NTA ಪರೀಕ್ಷೆಗಳಲ್ಲಿ ಪಡೆದ ಸ್ಕೋರ್‌ಗಳಲ್ಲಿ ಅತ್ಯುತ್ತಮವಾದದ್ದನ್ನು ಪರಿಗಣಿಸಿ ಅಭ್ಯರ್ಥಿಗಳ ರ್ಯಾಂಕ್​ ಬಿಡುಗಡೆ ಮಾಡಲಾಗಿದೆ.

ಪರೀಕ್ಷೆಯನ್ನು ಇಂಗ್ಲಿಷ್, ಹಿಂದಿ, ಗುಜರಾತಿ, ಅಸ್ಸಾಮಿ, ಬಂಗಾಳಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ಬರೆಯುವುದಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಅವಕಾಶ ಮಾಡಿಕೊಟ್ಟಿತ್ತು.

ಇದನ್ನು ಓದಿ:

ABOUT THE AUTHOR

...view details