ಹೈದ್ರಾಬಾದ್:2023 ಜನವರಿ ಸೆಷನ್ನ ಜೆಇಇ ಪರೀಕ್ಷೆ ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಇಂದು ಪ್ರಕಟಿಸುವ ಸಾಧ್ಯತೆ ಇದೆ. ಜೆಇಇ ಮೇನ್ ಪರೀಕ್ಷೆಯು ಜನವರಿ 24ರಿಂದ ಫೆಬ್ರವರಿ 1ರವರೆಗೆ ನಡೆದದಿತ್ತು. ಎನ್ಐಟಿ, ಐಐಐಟಿ ಮತ್ತು ಇತರೆ ಸೆಂಟ್ರಲಿ ಫಂಡೆಡ್ ಟೆಕ್ನಿಕಲ್ ಇನ್ಸುಟಿಟ್ಯೂಶನ್ (ಸಿಎಫ್ಟಿಐ) ಮತ್ತು ರಾಜ್ಯ ಸರ್ಕಾರದ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಅಡಿಗಳಲ್ಲಿ ಬರುವ ಇಂಜಿನಿಯರಿಂಗ್ ಪದವಿಗಳಿಗೆ ಈ ಜೆಇಇ ಪರೀಕ್ಷೆಯನ್ನು ನಡೆಸಲಾಗುತ್ತದೆ.
ಎನ್ಟಿಎ ಬಿಡುಗಡೆ ಮಾಡಿದ ದತ್ತಾಂಶದ ಅನುಸಾರ, 9 ಲಕ್ಷ ಅಭ್ಯರ್ಥಿಗಳು ಜೆಇಇ ಸೆಷನ್ 1ಕ್ಕೆ ದಾಖಲಾಗಿದ್ದು, ಅದರಲ್ಲಿ ಬಿಇ/ಬಿಟೆಕ್ ಮೊದಲ ಪೇಪರ್ಗೆ 8.6 ಲಕ್ಷ ಮಂದಿ ಅಭ್ಯರ್ಥಿಗಳು ಹಾಜರಾಗಿದ್ದರು. ಬಿ. ಆರ್ಕ್/ಬಿ ಪ್ಲಾನಿಂಗ್ನ ಪೇಪರ್ 2ಗೆ 0.46 ಲಕ್ಷ ಮಂದಿ ಪರೀಕ್ಷೆ ಬರೆದಿದ್ದರು. ಜನವರಿಯಲ್ಲಿ ನಡೆದ ಜೆಇಇ ಪರೀಕ್ಷೆಗೆ ಶೇ 95.8ರಷ್ಟು ಹಾಜರಾತಿಯೊಂದಿಗೆ ಪರೀಕ್ಷೆ ಬರೆಯಲಾಗಿತ್ತು. ಎನ್ಟಿಎ ಜೆಇಇ ಪರೀಕ್ಷೆ ಆರಂಭವಾದಗಿನಿಂದ ದಾಖಲೆಮಟ್ಟದ ಹಾಜರಾತಿ ಕಂಡು ಬಂದಿದೆ.
ದೇಶದ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳು- ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಸಂಸ್ಥೆ ಸೇರಿದಂತೆ ವಿವಿಧ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಕಲ್ಪಿಸಲು ಈ ಪರೀಕ್ಷೆ ನಡೆಸಲಾಗಿದೆ. ದೇಶದ ಪ್ರಮುಖ ತಾಂತ್ರಿಕ ಸಂಸ್ಥೆಗಳಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ (ಐಐಟಿ) ಪ್ರವೇಶಕ್ಕಾಗಿ ಜೆಇಇ ಅಡ್ವಾನ್ಸ್‌ಡ್ ಪರೀಕ್ಷೆಯನ್ನು ತೆಗೆದುಕೊಳ್ಳಲು ವಿದ್ಯಾರ್ಥಿಗಳಿಗೆ ಜೆಇಇ ಮೇನ್ ಅರ್ಹತಾ ಪರೀಕ್ಷೆಯಾಗಿದೆ. ಜೆಇಇ ಮುಖ್ಯ ಫಲಿತಾಂಶದ ಕಟ್-ಆಫ್ ಮಾರ್ಕ್ ಅನ್ನು ಆಧರಿಸಿ, ವಿದ್ಯಾರ್ಥಿಗಳಿಗೆ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುತ್ತದೆ.