ಕರ್ನಾಟಕ

karnataka

ETV Bharat / bharat

ಜೆಇಇ(ಮೇನ್ಸ್​) ಫಲಿತಾಂಶ ಪ್ರಕಟ: ನೂತನ ದಾಖಲೆ ಬರೆದ ಕಾವ್ಯಾ ಚೋಪ್ರಾ! - ಜೆಇಇ ಮುಖ್ಯ ಪರೀಕ್ಷೆಯ ಫಲಿತಾಂಶ

ಜೆಇಇ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ವಿದ್ಯಾರ್ಥಿನಿವೋರ್ವಳು 100ಕ್ಕೆ 100ರಷ್ಟು ಅಂಕ ಪಡೆದು ಹೊಸ ದಾಖಲೆ ನಿರ್ಮಾಣ ಮಾಡಿದ್ದಾಳೆ.

Kavya Chopra
Kavya Chopra

By

Published : Mar 25, 2021, 3:22 AM IST

ನವದೆಹಲಿ:ಎಂಜನಿಯರಿಂಗ್​ ಕೋರ್ಸ್​ಗಳ ಪ್ರವೇಶಕ್ಕಾಗಿ ಕಳೆದ ಮಾರ್ಚ್​ ತಿಂಗಳಲ್ಲಿ ನಡೆದಿದ್ದ ಜೆಇಇ ಮುಖ್ಯ ಪರೀಕ್ಷೆಯ ಫಲಿತಾಂಶ ಬುಧವಾರ ತಡರಾತ್ರಿ ಪ್ರಕಟಗೊಂಡಿದ್ದು, ಕಾವ್ಯಾ ಚೋಪ್ರಾ ನೂತನ ದಾಖಲೆ ನಿರ್ಮಾಣ ಮಾಡಿದ್ದಾರೆ.

100ಕ್ಕೆ 100ರಷ್ಟು ಅಂಕ ಪಡೆದುಕೊಂಡಿರುವ ಜತೆಗೆ ಎಂಜನಿಯರಿಂಗ್​​ ಪ್ರವೇಶ ಪರೀಕ್ಷೆಯಲ್ಲಿ 300ಕ್ಕೆ 300 ಅಂಕ ಗಳಿಕೆ ಮಾಡಿದ್ದಾಳೆ. ಈ ದಾಖಲೆ ನಿರ್ಮಾಣ ಮಾಡಿರುವ ಮೊದಲ ಅಭ್ಯರ್ಥಿ ಎಂಬ ಸಾಧನೆಗೈದಿದ್ದಾರೆ.

ಫೆಬ್ರವರಿ ತಿಂಗಳಲ್ಲಿ ನಡೆದಿದ್ದ ಮೊದಲ ಹಂತದ ಪರೀಕ್ಷೆಯಲ್ಲಿ ಕಾವ್ಯಾ ಚೋಪ್ರಾ 99.97ರಷ್ಟು ಅಂಕ ಗಳಿಸಿದ್ದರು. ಈ ದಾಖಲೆ ಮುರಿಯುವ ಉದ್ದೇಶದಿಂದ ಮಾರ್ಚ್​ನಲ್ಲಿ ನಡೆದ ಪರೀಕ್ಷೆಗೆ ಹಾಜರಾಗಲು ನಿರ್ಧರಿಸಿದ್ದಳು. 10ನೇ ತರಗತಿಯಲ್ಲಿ ಶೇ.97.6ರಷ್ಟು ಅಂಕಗಳಿಕೆ ಮಾಡಿದ್ದ ಕಾವ್ಯಾ ಐಒಕ್ಯೂಪಿ, ಐಒಕ್ಯೂಸಿ ಮತ್ತು ಐಒಕ್ಯೂಎಂ ಅರ್ಹತೆ ಪಡೆದುಕೊಂಡಿದ್ದಾರೆ. ಕಾವ್ಯಾ ಅಧ್ಯಯನಕ್ಕಾಗಿ ಪ್ರತಿದಿನ ಸುಮಾರು 7ರಿಂದ 8 ಗಂಟೆಗಳ ಕಾಲ ಓದುವುದರಲ್ಲಿ ಕಳೆಯುತ್ತಾರೆ.

ಇದನ್ನೂ ಓದಿ: ಭೀಕರ ರಸ್ತೆ ಅಪಘಾತ: ಐವರು ವಿದ್ಯಾರ್ಥಿಗಳು ಸ್ಥಳದಲ್ಲೇ ದುರ್ಮರಣ!

ಏಪ್ರಿಲ್​ ಹಾಗೂ ಮೇನಲ್ಲಿ ಇನ್ನೂ ಎರಡು ಹಂತದ ಪರೀಕ್ಷೆಗಳು ನಡೆಯಲಿದ್ದು, ಕೊನೆಯ ರ್‍ಯಾಂಕ್ ಪಟ್ಟಿ ಪ್ರಕಟವಾಗಲಿದೆ.

ABOUT THE AUTHOR

...view details