ಇಟಾನಗರ (ಅರುಣಾಚಲ ಪ್ರದೇಶ): ಜನತಾದಳ ಯುನೈಟೆಡ್ ಪಕ್ಷದ ಏಳು ಶಾಸಕರಲ್ಲಿ ಆರು ಜನರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಜೆಡಿ(ಯು)ಗೆ ಶಾಕ್ ನೀಡಿದ್ದಾರೆ.
ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲದ ಏಕೈಕ ಶಾಸಕ ಲಿಕಬಾಲಿ ಕ್ಷೇತ್ರದ ಕಾರ್ಡೋ ನೈಗ್ಯೋರ್ ಸಹ ಬಿಜೆಪಿಗೆ ಸೇರಿದ್ದಾರೆ. ಅರುಣಾಚಲ ಪ್ರದೇಶದ ವಿಧಾನಸಭೆ ಬಿಡುಗಡೆ ಮಾಡಿರುವ ಬುಲೆಟಿನ್ನಲ್ಲಿ ಈ ಬಗ್ಗೆ ತಿಳಿಸಲಾಗಿದೆ.