ಪಾಟ್ನಾ(ಬಿಹಾರ):ಅಪರಿಚಿತ ವ್ಯಕ್ತಿಗಳು ಜೆಡಿಯು ಮುಖಂಡನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಾಟ್ನಾದ ದನಾಪುರ ಪ್ರದೇಶದಲ್ಲಿ ಸೋಮವಾರ ನಡೆದಿದೆ. ಪೊಲೀಸರ ಪ್ರಕಾರ ಜೆಡಿಯು ಮುಖಂಡ ದೀಪಕ್ ಕುಮಾರ್ ಮೆಹ್ತಾ ಭೋಜನ ಮುಗಿಸಿ ತನ್ನ ನಿವಾಸದ ಆವರಣದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ದಾಳಿಕೋರರು ಗುಂಡುಹಾರಿಸಿದ್ದಾರೆ. ದೀಪಕ್ ಕುಮಾರ್ ಮೆಹ್ತಾ ಅವರು ದಾನಾಪುರ ನಗರ ಪರಿಷತ್ನ ಉಪಾಧ್ಯಕ್ಷರಾಗಿದ್ದು, ಅವರ ಎದೆಗೆ ಒಂದು ಗುಂಡು, ಮತ್ತೊಂದು ಗುಂಡು ತಲೆಗೆ ತಗುಲಿದೆ.
ಮೊದಲಿಗೆ ದೀಪಕ್ ಕುಮಾರ್ ಮೆಹ್ತಾ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು ಗಲಾಟೆ ಸೃಷ್ಟಿಸಿ ನಸ್ರಿಗಂಜ್ ಪೊಲೀಸ್ ಠಾಣೆಯನ್ನು ಧ್ವಂಸಗೊಳಿಸಿದ್ದಾರೆ. ನಂತರ ಡಣಾಪುರ - ಗಾಂಧಿ ಮೈದಾನ ಮುಖ್ಯರಸ್ತೆ ತಡೆದಿದ್ದಾರೆ. ನಂತರ ಪೊಲೀಸರು ಜನರನ್ನು ಚದುರಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ದೀಪಕ್ ಕುಮಾರ್ ಹತ್ಯೆಗೆ ಕಾರಣ ತಿಳಿದು ಬಂದಿಲ್ಲ.