ಬಿಜಾಪುರ(ಛತ್ತೀಸ್ಗಢ):ಏಪ್ರಿಲ್ 3ರಂದು ಬಿಜಾಪುರ-ಬಸ್ತಾರ್ ಗಡಿಯಲ್ಲಿ ನಡೆದ ನಕ್ಸಲರ ಭೀಕರ ದಾಳಿಯಲ್ಲಿ 22 ಯೋಧರು ಹುತಾತ್ಮರಾಗಿದ್ದು, ಅನೇಕರು ಗಾಯಗೊಂಡಿದ್ದಾರೆ. ಇವರು ಸದ್ಯ ರಾಯ್ಪುರ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎನ್ಕೌಂಟರ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಗಾಯಗೊಂಡಿರುವ ಸೈನಿಕರು 'ಈಟಿವಿ ಭಾರತ'ದೊಂದಿಗೆ ಘಟನೆಯ ಮಾಹಿಯನ್ನು ಹಂಚಿಕೊಂಡಿದ್ದಾರೆ. ಎಸ್ಟಿಎಫ್ ಕಾನ್ಸ್ಟೇಬಲ್ ದೇವ್ ಪ್ರಕಾಶ್ ಮಾತನಾಡಿ, ನಕ್ಸಲರು ನಮ್ಮನ್ನ ನಾಲ್ಕು ಕಡೆಗಳಿಂದಲೂ ಸುತ್ತುವರೆದಿದ್ದರು. ಎಲ್ಲ ಕಡೆಯಿಂದ ಗುಂಡಿನ ದಾಳಿ ನಡೆಯುತ್ತಿದ್ದ ಕಾರಣ ನಾವು ಸಹ ಗುಂಡಿನ ದಾಳಿ ನಡೆಸಲು ಶುರು ಮಾಡಿದ್ವಿ. ಆಪರೇಷನ್ ಮಾಡುವ ಸಮಯದಲ್ಲಿ ಸುಮಾರು 300ರಿಂದ 400 ನಕ್ಸಲರು ಸ್ಥಳದಲ್ಲಿದ್ದರು. ಅನೇಕ ನಕ್ಸಲರು ನಮ್ಮ ಗುಂಡಿನ ದಾಳಿಗೆ ಬಲಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ತಿಳಿಸಿದರು. ದಾಳಿಯಲ್ಲಿ ಗಾಯಗೊಂಡಿದ್ದ ಯೋಧರನ್ನು ಬೇರೆ ಕಡೆ ಸಾಗಿಸಲು ನಮಗೆ ಸಾಧ್ಯವಾಗುತ್ತಿರಲಿಲ್ಲ. ಆದರೂ ಅವರನ್ನು ಉಳಿಸುವ ಪ್ರಯತ್ನ ಮಾಡಿದ್ದೇವೆ ಎಂದರು.