ಕರ್ನಾಟಕ

karnataka

ETV Bharat / bharat

ಭಾರತದ ಗಡಿ ಪ್ರವೇಶಿಸಿದ ಪಾಕ್​ ಬಾಲಕ: ಆಹಾರ ನೀಡಿ ಮಾನವೀಯತೆ ಮೆರೆದ ಸೈನಿಕರು - ಪಾಕ್ ರೇಂಜರ್ಸ್​ಗೆ

ಆಕಸ್ಮಿಕವಾಗಿ 8 ವರ್ಷದ ಪಾಕ್​ ಬಾಲಕನೊಬ್ಬ ಭಾರತದ ಗಡಿ ಪ್ರವೇಶಿಸಿದ್ದು, ಮಗುವನ್ನು ನೋಡಿದ ಸೈನಿಕರು ಆತನಿಗೆ ಆಹಾರ ನೀಡಿ ಪಾಕ್ ರೇಂಜರ್ಸ್​ಗೆ ಹಸ್ತಾಂತರಿಸಿದ್ದಾರೆ.

ಮಾನವೀಯತೆ ಮೆರೆದ ಸೈನಿಕರು
ಮಾನವೀಯತೆ ಮೆರೆದ ಸೈನಿಕರು

By

Published : Apr 3, 2021, 6:32 AM IST

ಬಾರ್ಮರ್: ಇಂಡೋ - ಪಾಕ್ ಗಡಿಯಲ್ಲಿ ಮತ್ತೊಮ್ಮೆ ನಮ್ಮ ಗಡಿ ಭದ್ರತಾ ಪಡೆಗಳು ಮಾನವೀಯತೆ ಮೆರೆದಿದ್ದಾರೆ.

ಹೌದು, ಆಕಸ್ಮಿಕವಾಗಿ ಭಾರತದ ಗಡಿ ಪ್ರವೇಶಿಸಿದ 8 ವರ್ಷದ ಪಾಕಿಸ್ತಾನಿ ಮಗುವನ್ನು ಸೈನಿಕರು ರಕ್ಷಿಸಿ, ಪಾಕಿಸ್ತಾನದ ರೇಂಜರ್ಸ್‌ಗೆ ಹಸ್ತಾಂತರಿಸಿದ್ದಾರೆ.

ಪಾಕಿಸ್ತಾನದ ಥಾರ್​ಪಾರ್ಕರ್ ಜಿಲ್ಲೆಯ ಕರೀಮ್ ಎಂಬ 8 ವರ್ಷದ ಬಾಲಕ ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ಬಾರ್ಮರ್‌ನ ಬಕ್ಸಾರ್ ಗಡಿಯ ಪಕ್ಕದಿಂದ ಭಾರತದ ಗಡಿಯನ್ನು ಪ್ರವೇಶಿಸಿದ್ದರು. ನಂತರ ಅಲ್ಲಿಯೇ ಬಾಲಕ ಜೋರಾಗಿ ಅಳಲು ಪ್ರಾರಂಭಿಸಿದನು. ಮಗುವಿಗೆ ಬುದ್ಧಿಮಾತು ಹೇಳಿದ ಸೈನಿಕರು, ಅವನಿಗೆ ಆಹಾರ ನೀರು ನೀಡಿದರು. ತದನಂತರ ಬಿಎಸ್ಎಫ್ ಸಿಬ್ಬಂದಿ ಪಾಕಿಸ್ತಾನದ ರೇಂಜರ್ಸ್ ಜೊತೆ ಧ್ವಜ ಸಭೆ ನಡೆಸಿ, ಕರೀಮ್ ಅವನನ್ನು ಪಾಕ್ ರೇಂಜರ್ಸ್‌ಗೆ ಹಸ್ತಾಂತರಿಸಿದರು.

ಈ ವೇಳೆ ಪಾಕಿಸ್ತಾನದ ರೇಂಜರ್ಸ್ ಗಡಿ ಭದ್ರತಾ ಪಡೆ ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿದರು.

ABOUT THE AUTHOR

...view details