ಕರ್ನಾಟಕ

karnataka

ETV Bharat / bharat

ರೈಲಿನಿಂದ ಬಿದ್ದ ಪ್ರಯಾಣಿಕನನ್ನು ಕಾಪಾಡಿದ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಸಿಬ್ಬಂದಿ! Video... - ಮೇಲ್ ಎಕ್ಸ್​​ಪ್ರೆಸ್ ರೈಲು ದುರಂತ

ರೈಲು ಹತ್ತುವಾಗ ಆಕಸ್ಮಿಕವಾಗಿ ಬಿದ್ದ ಪ್ರಯಾಣಿಕನನ್ನು ರೈಲ್ವೆ ರಕ್ಷಣಾ ದಳದ ಸಿಬ್ಬಂದಿ ರಕ್ಷಿಸಿರುವ ಘಟನೆ ಮಹಾರಾಷ್ಟ್ರದ ವಸಾಯಿ ರೋಡ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

Jawana saves train passenger's life: Thrilling incident at Vasai Road railway station
ರೈಲಿನಿಂದ ಬಿದ್ದ ಪ್ರಯಾಣಿಕನನ್ನು ಕಾಪಾಡಿದ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಸಿಬ್ಬಂದಿ

By

Published : Jan 25, 2022, 7:34 AM IST

ಮುಂಬೈ, ಮಹಾರಾಷ್ಟ್ರ:ರೈಲು ಹತ್ತುವಾಗ ಆಕಸ್ಮಿಕವಾಗಿ ಪ್ಲಾಟ್​ಫಾರ್ಮ್​ ಮೇಲೆ ಬಿದ್ದ ವ್ಯಕ್ತಿಯೊಬ್ಬನನ್ನು ರೈಲ್ವೆ ರಕ್ಷಣಾ ದಳದ ಸಿಬ್ಬಂದಿ ರಕ್ಷಿಸಿರುವ ರೋಮಾಂಚನಕಾರಿ ಘಟನೆ ಮಹಾರಾಷ್ಟ್ರದ ವಸಾಯಿ ರೋಡ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ವ್ಯಕ್ತಿಯೋರ್ವ ಪಶ್ಚಿಮ ರೈಲ್ವೆ ಮೇಲ್-ಎಕ್ಸ್​ಪ್ರೆಸ್ ರೈಲು ಹತ್ತುವಾಗ ಘಟನೆ ನಡೆದಿದ್ದು, ಕರ್ತವ್ಯದಲ್ಲಿದ್ದ ರೈಲ್ವೆ ಸಿಬ್ಬಂದಿ ರಕ್ಷಿಸಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ರೈಲಿನಿಂದ ಬಿದ್ದ ಪ್ರಯಾಣಿಕನನ್ನು ಕಾಪಾಡಿದ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಸಿಬ್ಬಂದಿ

ಮಾಹಿತಿಯ ಪ್ರಕಾರ, ಮೇಲ್-ಎಕ್ಸ್​ಪ್ರೆಸ್ ರೈಲು ಭಾನುವಾರ ಮುಂಜಾನೆ ವಸಾಯಿ ರಸ್ತೆ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 3ಕ್ಕೆ ಬಂದಿತ್ತು. ರಾಜಸ್ಥಾನದ ಬನ್ಸ್ವಾರಾಗೆ ರೈಲು ತೆರಳುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಹತ್ತಲು ಯತ್ನಿಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಈ ವೇಳೆ ಆತ ಸಮತೋಲನ ಕಳೆದುಕೊಂಡಿದ್ದು, ಕೆಳಗೆ ಬಿದ್ದಿದ್ದಾನೆ. ಈ ವೇಳೆ ಕರ್ತವ್ಯದಲ್ಲಿದ್ದ ಆರ್‌ಪಿಎಫ್ ಕಾನ್‌ಸ್ಟೆಬಲ್ ರಾಮೇಂದ್ರ ಕುಮಾರ್ ಆತನನ್ನು ಪಕ್ಕಕ್ಕೆ ಎಳೆದು, ಪ್ರಾಣಾಪಾಯದಿಂದ ಕಾಪಾಡಿದ್ದಾರೆ. ಪ್ರಯಾಣಿಕ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ:ಪಾಕ್​ ಪ್ರವೇಶಿಸಿ ಜೈಲು ಪಾಲಾಗಿದ್ದ 20 ಮೀನುಗಾರರು ಭಾರತಕ್ಕೆ ವಾಪಸ್​

ABOUT THE AUTHOR

...view details