ಆರೋಗ್ಯಕ್ಕೆ ಕ್ಯಾಲೋರಿ, ಕೊಬ್ಬು ಮತ್ತು ಅತಿಯಾದ ಸಕ್ಕರೆಯಂತಹ ಆಹಾರಗಳು ಹಾನಿಕಾರವೆಂದು ತಿಳಿದಿದ್ದರೂ ಸಹ ರುಚಿಯ ಕಾರಣಕ್ಕಾಗಿ ಅವುಗಳನ್ನು ಅತಿಯಾಗಿ ಸೇವಿಸುತ್ತಾರೆ. ಹಾಗಾದರೆ ಈ ಒಂದು ಪ್ರವೃತ್ತಿಯನ್ನು ಮೆದುಳಿನಲ್ಲಿ ಯಾವುದು ಪ್ರಚೋದಿಸುತ್ತದೆ ಎಂಬುದರ ಕುರಿತು "ದಿ FASEB ಜರ್ನಲ್" ನಲ್ಲಿ ಪ್ರಕಟವಾದ ಒಂದು ಸಂಶೋಧನೆ ತಿಳಿಸಿದೆ.
CREB-ನಿಯಂತ್ರಿತ ಟ್ರಾನ್ಸ್‌ಕ್ರಿಪ್ಷನ್ ಕೋಆಕ್ಟಿವೇಟರ್ 1 (CRTC1) ಎಂಬ ಜೀನ್ ಮಾನವರಲ್ಲಿ ಸ್ಥೂಲಕಾಯತೆ ತಡೆಯ ಸಂಪರ್ಕ ಹೊಂದಿದೆ ಎಂದು ತಿಳಿದು ಬಂದಿದೆ. ಇದಕ್ಕಾಗಿ ಇಲಿಯನ್ನು ಸಂಶೋಧನೆಗೆ ಒಳಪಡಿಸಿದಾಗ CRTC1ಯ ಕೊರತೆ ಇರುವ ಇಲಿಗಳು ಸ್ಥೂಲಕಾಯತೆಯನ್ನು ಅಭಿವೃದ್ಧಿಪಡಿಸುತ್ತವಂತೆ. ಈ CRTC1 ನ್ನು ಸಾಮಾನ್ಯ ಕಾರ್ಯಾಚರಣೆಗೆ ಒಳಪಡಿಸಿದಾಗ ತಿಳಿದಿದ್ದು ಏನೆಂದರೆ, ಇವು ದೇಹದಲ್ಲಿನ ಬೊಜ್ಜು ತಡೆಯುತ್ತದೆ. ಆದರೆ, CRTC1 ಎಲ್ಲಾ ಮೆದುಳಿನ ನ್ಯೂರಾನ್‌ಗಳಲ್ಲಿ ಕಂಡುಬರುವುದರಿಂದ ಸ್ಥೂಲಕಾಯತೆಯನ್ನು ಕಡಿಮೆ ಮಾಡುವ ನಿಖರವಾದ ನ್ಯೂರಾನ್‌ಗಳು ಯಾವುವು ಮತ್ತು ಅವುಗಳು ಒಳಗೊಂಡಿರುವ ಕಾರ್ಯವಿಧಾನವು ಹೇಗೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಹಾಗಾಗಿ CRTC1ವು ಸ್ಥೂಲಕಾಯತೆಯನ್ನು ನಿಗ್ರಹಿಸುವ ಕಾರ್ಯವಿಧಾನವನ್ನು ಸ್ಪಷ್ಟಪಡಿಸಲು, ಒಸಾಕಾ ಮೆಟ್ರೊಪಾಲಿಟನ್ ವಿಶ್ವವಿದ್ಯಾಲಯದ ಅಸೋಸಿಯೇಟ್ ಪ್ರೊಫೆಸರ್ ಶಿಗೆನೊಬು ಮಾಟ್ಸುಮುರಾರವರು ತಮ್ಮ ನೇತೃತ್ವದ ಸಂಶೋಧನಾ ಗುಂಪೊಂದು ಮೆಲನೊಕಾರ್ಟಿನ್-4 ರಿಸೆಪ್ಟರ್ (MC4R) ಅನ್ನು ವ್ಯಕ್ತಪಡಿಸುವ ನರಕೋಶಗಳ ಮೇಲೆ ಕೇಂದ್ರೀಕರಿಸಿದ್ದಾರೆ. ಈಗ ನರಕೋಶಗಳಲ್ಲಿ MC4R- ಗಳ ಜೊತೆ CRTC1ವಿದ್ದರೆ MC4R ರಿಂದ ಉಂಟಾಗುವ ಸ್ಥೂಲಕಾಯತೆಯನ್ನು CRTC1 ನಿಗ್ರಹಿಸುತ್ತದೆಯಂತೆ. ಇದಕ್ಕೆ ಕಾರಣ MC4R ಜೀನ್‌ನಲ್ಲಿನ ರೂಪಾಂತರಗಳು ಎಂದು ಸಂಶೋಧಕರು ಊಹಿಸಿದ್ದಾರೆ.