ಕರ್ನಾಟಕ

karnataka

ETV Bharat / bharat

ಭಾರತಕ್ಕೆ ಜಪಾನ್​ ಸಹಾಯಾಸ್ತ : 18.5 ಮಿಲಿಯನ್ ಯುಎಸ್ ಡಾಲರ್ಸ್​ ತುರ್ತು ಅನುದಾನ ಘೋಷಣೆ - ಭಾರತಕ್ಕೆ 18.5 ಮಿಲಿಯನ್ ಯುಎಸ್ ಡಾಲರ್ಸ್​

ಭಾರತದಲ್ಲಿ ಪ್ರಸ್ತುತ ಕೋವಿಡ್​ ಸೋಂಕು ಉಲ್ಬಣವಾದ ಹಿನ್ನೆಲೆ ಜಪಾನ್ ಸರ್ಕಾರ ಸುಮಾರು 18.5 ದಶಲಕ್ಷ ಯುಎಸ್ ಡಾಲರ್​ಗಳಷ್ಟು ತುರ್ತು ಅನುದಾನವನ್ನು ಭಾರತಕ್ಕೆ ವಿಸ್ತರಿಸಲು ನಿರ್ಧರಿಸಿದೆ.

japan
japan

By

Published : May 14, 2021, 3:37 PM IST

ನವದೆಹಲಿ: ಭಾರತದಲ್ಲಿ ಕೋವಿಡ್​ ಸೋಂಕು ಉಲ್ಬಣವಾದ ಹಿನ್ನೆಲೆ ಜಪಾನ್ ಸರ್ಕಾರ ಸುಮಾರು 18.5 ದಶಲಕ್ಷ ಯುಎಸ್ ಡಾಲರ್​ಗಳಷ್ಟು ತುರ್ತು ಅನುದಾನವನ್ನು ಭಾರತಕ್ಕೆ ವಿಸ್ತರಿಸಲು ನಿರ್ಧರಿಸಿದೆ.

ನವದೆಹಲಿಯ ಜಪಾನ್ ರಾಯಭಾರ ಕಚೇರಿಯ ಪ್ರಕಾರ, ಏಪ್ರಿಲ್ 30ರಂದು ಜಪಾನ್ ಸರ್ಕಾರವು ಭಾರತ ಸರ್ಕಾರದ ಸಮನ್ವಯದೊಂದಿಗೆ 300 ಆಮ್ಲಜನಕ ಸಾಂದ್ರಕಗಳು ಮತ್ತು 300 ವೆಂಟಿಲೇಟರ್‌ಗಳನ್ನು ಭಾರತಕ್ಕೆ ಒದಗಿಸುವ ಕಾರ್ಯವಿಧಾನವನ್ನು ಮುಂದುವರಿಸುವ ನಿರ್ಧಾರವನ್ನು ಪ್ರಕಟಿಸಿದೆ ಎಂದು ಹೇಳಿದೆ.

ಅಲ್ಲದೇ ಜಪಾನ್ ಭಾರತಕ್ಕೆ 50 ಮಿಲಿಯನ್ ಯುಎಸ್ ಡಾಲರ್ವರೆಗೆ ಹೆಚ್ಚುವರಿ ಅನುದಾನ ಸಹಾಯವನ್ನು ನೀಡಲು ಸಿದ್ಧವಾಗಿದೆ ಎಂದು ತಿಳಿಸಿದೆ. ಇದಲ್ಲದೆ, ಮೇ 5 ರಂದು ಘೋಷಿಸಲಾದ 50 ಮಿಲಿಯನ್ ಡಾಲರ್‌ಗಳ ನೆರವಿನ ಭಾಗವಾಗಿ ಯುಎನ್‌ಒಪಿಎಸ್ ಮೂಲಕ ಹೆಚ್ಚುವರಿ 500 ವೆಂಟಿಲೇಟರ್‌ಗಳು ಮತ್ತು 500 ಆಮ್ಲಜನಕ ಸಾಂದ್ರಕಗಳನ್ನು ಭಾರತಕ್ಕೆ ನೀಡಲಾಗುವುದು.

ಎಲ್ಲಾ ಸೇರಿ ಒಟ್ಟು 800 ವೆಂಟಿಲೇಟರ್‌ಗಳು ಮತ್ತು ಒಟ್ಟು 800 ಆಮ್ಲಜನಕ ಸಾಂದ್ರಕಗಳನ್ನು ಒದಗಿಸಲಾಗುವುದು ಅಂತ ಜಪಾನ್​ ತಿಳಿಸಿದೆ ಎಂದು ಭಾರತ ರಾಯಭಾರ ಕಚೇರಿ ಹೇಳಿದೆ.

ಜಪಾನ್ ತನ್ನ #fightCOVIDನಲ್ಲಿ ಭಾರತದೊಂದಿಗೆ ನಿಲ್ಲುತ್ತದೆ! # ಜಪಾನ್ ಇಂಡಿಯಾ ”ಎಂದು ಭಾರತದ ಜಪಾನಿನ ರಾಯಭಾರ ಕಚೇರಿ ಟ್ವೀಟ್ ಮಾಡಿದೆ. ಭಾರತದ ಕೋವಿಡ್​ ಪರಿಸ್ಥಿತಿಯನ್ನು ನಿವಾರಿಸಲು ಜಪಾನ್‌ನ ನೆರವು ಸಹಕಾರಿಯಾಗಲಿದೆ ಎಂದು ರಾಯಭಾರ ಕಚೇರಿ ಹೇಳಿದೆ.

ABOUT THE AUTHOR

...view details