ಕರ್ನಾಟಕ

karnataka

ETV Bharat / bharat

'ನಾವು ಚುಂಬಿಸಬಹುದೇ?' ಎಂದು ಕೇಳಿದ ಫ್ಯಾನ್ಸ್​ಗೆ ಜಾಹ್ನವಿ ಕಪೂರ್ ಏನಂದ್ರು ಗೊತ್ತಾ? - ಅಭಿಮಾನಿಗಳ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ ಜಾನ್ವಿ ಕಪೂರ್

ನೆಚ್ಚಿನ ಸಹನಟ ಯಾರು ಎಂದು ಕೇಳಿದಾಗ ನಟಿ ಜಾಹ್ನವಿ ಕಪೂರ್ ಅವರು, ಗುಂಜನ್ ಸಕ್ಸೇನಾ ಮತ್ತು ಪಂಕಜ್ ತ್ರಿಪಾಠಿ ಅವರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಹಾಗೆ ಅಭಿಮಾನಿಗಳ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ನಾವು ನಿಮ್ಮ ಕೆನ್ನೆಗೆ ಚುಂಬಿಸಬಹುದೇ ಎಂದು ಫ್ಯಾನ್ಸ್​ ಕೇಳಿದಾಗ 'NO' ಎಂದು ಪ್ರತಿಕ್ರಿಯಿಸಿದ್ದಾರೆ.

janhvi-kapoor-replies-to-fan-who-asked-can-we-kiss
ಜಾನ್ವಿ ಕಪೂರ್

By

Published : Mar 21, 2021, 3:26 PM IST

ಹೈದರಾಬಾದ್: ಬಾಲಿವುಡ್ ನಟಿ ಜಾಹ್ನವಿ ಕಪೂರ್ ಇಂದು ತಮ್ಮ ಅಭಿಮಾನಿಗಳೊಂದಿಗೆ ಇನ್ಸ್ಟಾಗ್ರಾಮ್ ಮೂಲಕ ಸಂವಾದ ನಡೆಸಿದರು. ಈ ವೇಳೆ ಅವರ ಕೂದಲ ಪೋಷಣೆ, ದಿನಚರಿ ಸೇರಿದಂತೆ ಅಭಿಮಾನಿಗಳು ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ವೇಳೆ ಅಭಿಮಾನಿವೋರ್ವ ನಿಮಗೆ ಚುಂಬಿಸಬಹುದೇ? ಎಂದೂ ಕೂಡ ಕೇಳಿದ್ದಾನೆ.

ಜಾಹ್ನವಿ ಕಪೂರ್

ಅಭಿಮಾನಿಗಳ ಹಲವಾರು ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಅವರಿಗೆ ನಿಮ್ಮ ನೆಚ್ಚಿನ ನೆಚ್ಚಿನ ಸರಣಿ ಚಿತ್ರ ಮತ್ತು ಶೋ? ಯಾವುದು ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿ, ಸ್ಕಿಟ್ಸ್ ಕ್ರೀಕ್​ ಎಂದು ಉತ್ತರಿಸಿದ್ದಾರೆ. ಹಾಗೆ ನೆಚ್ಚಿನ ಸಹನಟ ಯಾರು ಎಂದು ಕೇಳಿದಾಗ ಜಾಹ್ನವಿ ಗುಂಜನ್ ಸಕ್ಸೇನಾ ಮತ್ತು ಪಂಕಜ್ ತ್ರಿಪಾಠಿ ಅವರ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಜಾನ್ವಿ ಕಪೂರ್

ಪ್ರಶ್ನೆಗಳು ಮುಂದುವರೆದಂತೆ ಅಭಿಮಾನಿವೋರ್ವ "ನಾವು ಚುಂಬಿಸಬಹುದೇ?" ಎಂದು ಕೇಳಿದ್ದಾರೆ. ಇದಕ್ಕೆ "NO" ಎಂದಿದ್ದಾರೆ. ಹಾಗೆ ಮಾಸ್ಕ್​ನಲ್ಲಿರುವ ತಮ್ಮ ಚಿತ್ರದೊಂದಿಗೆ ಈ ಪ್ರತ್ಯುತ್ತರ ನೀಡಿದ್ದಾರೆ.

ಮತ್ತೋರ್ವ ಅಭಿಮಾನಿ "ಆತಂಕವನ್ನು ನಿಲ್ಲಿಸುವುದು ಹೇಗೆ?" ಎಂದು ಕೇಳಿದ್ದಕ್ಕೆ, ತಮಾಷೆಯ ವಿಡಿಯೋದ ಜೊತೆಗೆ ಉತ್ತರಿಸಿದ ಜಾಹ್ನವಿ, ಒಂದು ದಿಂಬನ್ನು ತಬ್ಬಿಕೊಂಡು ದುಃಖದ ಹಾಡುಗಳನ್ನು ಹಾಡಿ ಎಂದು ಬರೆದಿದ್ದಾರೆ.

ABOUT THE AUTHOR

...view details