ಕರ್ನಾಟಕ

karnataka

ETV Bharat / bharat

ಕೋಲ್ಕತ್ತಾ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳ ಬ್ಯಾಂಕ್ ಖಾತೆಯಿಂದ ಹಣ ಎಗರಿಸಿದ ಸೈಬರ್​ ಕಳ್ಳರ ಬಂಧನ - ಬ್ಯಾಂಕ್ ಖಾತೆಯಿಂದ ಹಣ ಎಗರಿಸಿದ ನಾಲ್ವರು ಸೈಬರ್​ ಕಳ್ಳರು

ಕೋಲ್ಕತ್ತಾ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಬ್ಯಾಂಕ್ ಖಾತೆಯಿಂದ ಹಣ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ನಾಲ್ವರು ಸೈಬರ್ ಕಳ್ಳರನ್ನು ಶುಕ್ರವಾರ ಬಂಧಿಸಿದ್ದಾರೆ.

fraud from Kolkata High Court Chief Justice
ಕೋಲ್ಕತ್ತಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ನಾಲ್ವರು ಸೈಬರ್ ಕಳ್ಳರನ್ನು ಬಂಧಿಸಿದ್ದಾರೆ.

By

Published : Mar 24, 2023, 10:49 PM IST

ಜಮ್ತಾರಾ (ಜಾರ್ಖಂಡ್):ಕೋಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಬ್ಯಾಂಕ್ ಖಾತೆಯಿಂದ ಹಣ ಎಗರಿಸಿದ ನಾಲ್ವರು ಸೈಬರ್ ಕಳ್ಳರನ್ನು ಕೋಲ್ಕತ್ತಾ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬಳಿಕ ಕೋಲ್ಕತ್ತಾ ಪೊಲೀಸರು, ಈ ನಾಲ್ವರು ಆರೋಪಿಗಳನ್ನು ಟ್ರಾನ್ಸಿಟ್ ರಿಮಾಂಡ್‌ನಲ್ಲಿ ಕರೆದೊಯ್ದಿದ್ದಾರೆ.

ಸ್ಥಳೀಯ ಪೊಲೀಸರೊಂದಿಗೆ ಕೋಲ್ಕತ್ತಾ ಪೊಲೀಸರು, ಕರ್ಮತಾಂಡ್ ಪೊಲೀಸ್ ಠಾಣಾ ವ್ಯಾಪ್ತಿಯ ಜಿಲುವಾ ಮತ್ತು ಮಟತಾಂಡ್ ಗ್ರಾಮಗಳ ಮೇಲೆ ದಾಳಿ ನಡೆಸಿ, ಸೈಬರ್​ ಕಳ್ಳರನ್ನು ಬಂಧಿಸಲಾಗಿದೆ. ಶಿವಶಂಕರ್ ಮಂಡಲ್, ಮಿತ್ರ ಮಂಡಲ್, ತಪನ್ ಮಂಡಲ್ ಜೊತೆಗೆ ಮತ್ತೊಬ್ಬ ಆರೋಪಿ ಜಮ್ತಾರಾದಲ್ಲಿ ಕೋಲ್ಕತ್ತಾ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ನಾಲ್ವರು ಸೈಬರ್​ ಖದೀಮರು ಕೋಲ್ಕತ್ತಾ ಮುಖ್ಯ ನ್ಯಾಯಾಧೀಶರ ಖಾತೆಯಿಂದ ಸುಮಾರು ಐದು ಲಕ್ಷ ರೂ. ಕದ್ದಿದ್ದಾರೆ.

ಸೈಬರ್ ಅಪರಾಧದ ಎರಡು ಪ್ರತ್ಯೇಕ ಪ್ರಕರಣಗಳು ದಾಖಲು:ಕೋಲ್ಕತ್ತಾ ಪೊಲೀಸರ ಪ್ರಕಾರ, ಕೋಲ್ಕತ್ತಾದಲ್ಲಿ ಎರಡು ಪ್ರತ್ಯೇಕ ಸೈಬರ್ ಕ್ರೈಮ್ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಸಿಕ್ಕಿಬಿದ್ದ ಸೈಬರ್ ಕಳ್ಳರಿಂದ ಕೋಲ್ಕತ್ತಾದ ಅನೇಕ ಜನರು ಸೈಬರ್ ವಂಚನೆಗೆ ಒಳಗಾಗಿದ್ದಾರೆ. ಈ ಖದೀಮರು ಸುಮಾರು 12 ರಿಂದ 15 ಲಕ್ಷ ರೂ. ವಂಚಿಸಿದ್ದಾರೆ. ಇದರಲ್ಲಿ ಕೋಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರ ಖಾತೆಯಿಂದ 5 ಲಕ್ಷದ ವಂಚನೆಯೂ ಸೇರಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್​ ಕ್ರಿಮಿನಲ್‌ಗಳನ್ನು ಬಂಧಿಸಿದ ನಂತರ, ಅನೇಕ ಜನರು ಸೈಬರ್ ವಂಚನೆಗೆ ಒಳಗಾಗಿದ್ದಾರೆ ಎಂಬುದು ಕೋಲ್ಕತ್ತಾ ಪೊಲೀಸರು ತನಿಖೆಯಿಂದ ತಿಳಿದಿದೆ. ಕೋಲ್ಕತ್ತಾ ಪೊಲೀಸರು ಜಮ್ತಾರಾ ಮತ್ತು ಕರ್ಮಟಾಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಜಿಲುವಾ ಮಟ್ಟಂಡ್ ಗ್ರಾಮದ ನಾಲ್ವರು ವಂಚಕರನ್ನು ಹಿಡಿದಿದ್ದಾರೆ.

ಕಳ್ಳರನ್ನು ಟ್ರಾನ್ಸಿಟ್ ರಿಮಾಂಡ್​ಗೆ ಕರೆದೊಯ್ದ ಪೊಲೀಸರು:ಕೋಲ್ಕತ್ತಾ ಪೊಲೀಸರು ಬಂಧಿತ ನಾಲ್ವರು ಸೈಬರ್ ಖದೀಮರನ್ನು ಜಮ್ತಾರಾ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡು, ಕೋಲ್ಕತ್ತಾದ ಟ್ರಾನ್ಸಿಟ್ ರಿಮಾಂಡ್​ಗೆ ಕರೆದೊಯ್ದರು. ಕಳ್ಳರನ್ನು ಟ್ರಾನ್ಸಿಟ್ ರಿಮಾಂಡ್ ಕರೆದುಕೊಂಡು ಹೋದ ನಂತರ, ತನಿಖೆಯ ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೋಲ್ಕತ್ತಾ ಪೊಲೀಸರು ತಿಳಿಸಿದರು. ಜಮ್ತಾರಾ ಸೈಬರ್ ಪೊಲೀಸ್ ಠಾಣೆಯಲ್ಲದೆ, ಕರ್ಮತಾಂಡ್ ಪೊಲೀಸ್ ಠಾಣೆಯ ಪೊಲೀಸರೊಂದಿಗೆ ಇತರರು ಸಹ ಈ ಜಂಟಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಸೈಬರ್ ಕ್ರೈಂಗೆ ಜಮ್ತಾರಾ ಕುಖ್ಯಾತಿ:ಇತರೆ ರಾಜ್ಯಗಳ ಪೊಲೀಸರು ಜಮ್ತಾರಾದಲ್ಲಿ ಸೈಬರ್ ಕಳ್ಳರನ್ನು ಬಂಧಿಸಿ ತಮ್ಮ ವಶಕ್ಕೆ ತೆಗೆದುಕೊಂಡಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಛತ್ತೀಸ್‌ಗಢ, ಉತ್ತರ ಪ್ರದೇಶ, ದೆಹಲಿ ಮತ್ತಿತರ ರಾಜ್ಯಗಳ ಪೊಲೀಸರು ಇಲ್ಲಿಂದ ಕ್ರಿಮಿನಲ್‌ಗಳನ್ನು ಹಿಡಿದಿದ್ದಾರೆ. ಜೊತೆಗೆ ಕಳ್ಳರನ್ನೂ ಹುಡುಕಿಕೊಂಡು ಬಂದಿದ್ದಾರೆ. ಸೈಬರ್ ಕ್ರೈಂ ವಿಚಾರದಲ್ಲಿ ಜಮ್ತಾರಾ ಕುಖ್ಯಾತಿ ಪಡೆದಿದೆ. ಇಲ್ಲಿಂದಲೇ ಕೂತು ಸೈಬರ್ ಖದೀಮರು ಕೆಲವರನ್ನು ವಂಚನೆ ಮಾಡುತ್ತಾರೆ. ಪೊಲೀಸರು, ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು ಕೂಡಾ ವಂಚನೆಗೊಳಗಾಗಿದ್ದರು. ಈಗ ನ್ಯಾಯಾಂಗ ಅಧಿಕಾರಿಗಳು, ಮುಖ್ಯ ನ್ಯಾಯಮೂರ್ತಿಗಳಿಗೂ ಸೈಬರ್​ ಕಳ್ಳರು ವಂಚಿಸಿದ್ದಾರೆ.

ಇದನ್ನೂ ಓದಿ:ಅನರ್ಹ ಜನಪ್ರತಿನಿಧಿ ಪಟ್ಟಿಗೆ ಸೇರಿದ ರಾಹುಲ್ ಗಾಂಧಿ: ಚುನಾಯಿತ ಸ್ಥಾನ ಕಳೆದುಕೊಂಡ ರಾಜಕಾರಣಿಗಳು ಎಷ್ಟು?

ABOUT THE AUTHOR

...view details