ಜಾಮ್‌ನಗರ (ಗುಜರಾತ್): ಗುಜರಾತ್ನ ಜಾಮ್‌ನಗರ ದಕ್ಷಿಣ 79 ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ವಿಶಾಲ್ ತ್ಯಾಗಿ ಅವರನ್ನು ರಾಜಸ್ಥಾನದಲ್ಲಿ ಗುಜರಾತ್ ಎಟಿಎಸ್ ವಶಕ್ಕೆ ಪಡೆದಿದೆ. ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶಾಲ್ ತ್ಯಾಗಿ ಅವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಮಗಳ ಆಸೆ ಈಡೇರಿಸುವ ನಿಟ್ಟಿನಲ್ಲಿ ಅಭ್ಯರ್ಥಿ ವಿಶಾಲ್ ರಾಜಸ್ಥಾನಕ್ಕೆ ತೆರಳಿದ್ದು, ಈ ನಡುವೆ ಗುಜರಾತ್ ಎಟಿಎಸ್ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಇದರಿಂದ ಸಾಕಷ್ಟು ರಾಜಕೀಯ ಚರ್ಚೆ ಕೂಡ ಆರಂಭವಾಗಿದೆ.