ಜಮ್ಮು :ಇಲ್ಲಿನ ಭಾರತೀಯ ವಾಯುಪಡೆ (ಐಎಎಫ್) ನಿಲ್ದಾಣದ ಮೇಲೆ ನಡೆದ ಡ್ರೋನ್ ಬಾಂಬ್ ದಾಳಿಯಲ್ಲಿ ಎರಡು ಐಇಡಿಗಳಲ್ಲಿ ಆರ್‌ಡಿಎಕ್ಸ್ ಮತ್ತು ನೈಟ್ರೇಟ್ ಸೇರಿದಂತೆ ಸ್ಫೋಟಕ ವಸ್ತುಗಳ ಕಾಕ್ಟೇಲ್ ಬಳಸಲಾಗಿದೆ ಎಂದು ವಿಧಿವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ದ ತಜ್ಞರು ಹೇಳಿದ್ದಾರೆ.
ಭಾರತದಲ್ಲಿ ಆರ್‌ಡಿಎಕ್ಸ್ ಸಿಗುವುದಿಲ್ಲ, ಅದು ಪಾಕಿಸ್ತಾನದಿಂದ ಬಂದಿರಬಹುದು. ಹಾಗಾಗಿ, ಸ್ಪೋಟದಲ್ಲಿ ಪಾಕಿಸ್ತಾನದ ಕೈವಾಡ ಇರುವುದಕ್ಕೆ ಇದು ಸಾಕ್ಷಿಯಾಗಿದೆ. ಸ್ಪೋಟದ ಹಿಂದೆ ಮೂಲಸೌಕರ್ಯ ಹಾನಿ ಮಾಡುವ ಉದ್ದೇಶ ಇತ್ತು. ಜೊತೆಗೆ ಹೆಚ್ಚು ಸ್ಪ್ಲಿಂಟರ್‌ಗಳು ಮತ್ತು ಬಾಲ್-ಬೇರಿಂಗ್‌ಗಳನ್ನು ಹೊಂದಿರುವ ಸಿಬ್ಬಂದಿಯನ್ನು ಗುರಿಯಾಗಿಸಲಾಗಿತ್ತು. ಚೀನಾ ನಿರ್ಮಿತ ಡ್ರೋನ್ ಅನ್ನು ದಾಳಿಯಲ್ಲಿ ಬಳಸಲಾಗಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ.
ಏರ್ಬೇಸ್ ಮೇಲಿನ ದಾಳಿಯ ಹಿಂದೆ ನಿಷೇಧಿತ ಲಷ್ಕರ್-ಎ- ತೈಬಾ ಸಂಘಟನೆ ಇರುವ ಶಂಕೆಯಿಂದೆ ಎಂದು ಕಳೆದ ವಾರ ಜಮ್ಮು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಹೇಳಿದ್ದರು.