ಕರ್ನಾಟಕ

karnataka

ETV Bharat / bharat

ಕಾನ್​ಸ್ಟೇಬಲ್ ಪತ್ನಿ, ಪುತ್ರಿ ಮೇಲೆ ಉಗ್ರರಿಂದ ಗುಂಡಿನ ದಾಳಿ - ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿ

ಪೊಲೀಸ್ ಕಾನ್​ಸ್ಟೇಬಲ್​ವೊಬ್ಬರ ಪತ್ನಿ ಮತ್ತು ಪುತ್ರಿ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ ಘಟನೆ ಅನಂತ್​ನಗರ ಜಿಲ್ಲೆಯಲ್ಲಿ ನಡೆದಿದೆ.

Terrorists fire
Terrorists fire

By

Published : Jul 21, 2021, 5:41 AM IST

ಶ್ರೀನಗರ:ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿ ಮುಂದುವರಿದಿದೆ. ಪೊಲೀಸ್ ಕಾನ್​​ಸ್ಟೇಬಲ್​ವೊಬ್ಬರ ಪತ್ನಿ ಹಾಗೂ ಪುತ್ರಿಯ ಮೇಲೆ ಉಗ್ರರು ಗುಂಡಿನ ದಾಳಿ ಮಾಡಿದ್ದಾರೆ.

ದಾಳಿಯಲ್ಲಿ ಕಾನ್​ಸ್ಟೇಬಲ್ ಪತ್ನಿ, ಪುತ್ರಿ ಇಬ್ಬರೂ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅನಂತ್​ನಾಗ್ ಜಿಲ್ಲೆಯ ಕಾನ್​ಸ್ಟೇಬಲ್ ಸಾಜದ್ ಅಹಮದ್ ಮಲಿಕ್ ಅವರ ಕುಟುಂಬದ ಮೇಲೆ ಉಗ್ರರು ದಾಳಿ ಮಾಡಿದ್ದಾರೆ.

ದಾಳಿ ಮಾಡಿದವರಲ್ಲಿ ಓರ್ವ ಜೈಶ್ ಇ ಮೊಹಮ್ಮದ ಉಗ್ರ ಸಂಘಟನೆಯ ಮುಫ್ತಿ ಅಲ್ತಾಫ್ ಎಂಬಾತ ಇದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಣಿವೆ ರಾಜ್ಯದಲ್ಲಿ ಭದ್ರತಾ ಪಡೆ ಮತ್ತು ಉಗ್ರರ ಮಧ್ಯೆ ಗುಂಡಿನ ಕಾಳಗ ಆಗಾಗ ನಡೆಯುತ್ತಲೇ ಇರುತ್ತೆ.

ABOUT THE AUTHOR

...view details