ಶ್ರೀನಗರ(ಜಮ್ಮು ಮತ್ತು ಕಾಶ್ಮೀರ):ಗೃಹ ಮಾಲಿನ್ಯದಿಂದ ಜಮ್ಮು ಮತ್ತು ಕಾಶ್ಮೀರ ಪ್ರತಿ ವರ್ಷ 3,000 ಸಾವಿರ ಜನ ಸಾವನ್ನಪ್ಪುತ್ತಾರೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಶ್ವಾಸಕೋಶ ಕಾಯಿಲೆ ಕುರಿತು 2017ರಲ್ಲಿ ನಡೆಸಿದ ಅಧ್ಯಯನದಲ್ಲಿ ಈ ಮಾಹಿತಿ ಬೆಳಕಿಗೆ ಬಂದಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಮಾಲಿನ್ಯದಿಂದಾಗಿ ಪ್ರತಿ ವರ್ಷ 10,497 ಜನರು ಸಾಯುತ್ತಾರೆ. ಅದರಲ್ಲಿ 5,822 ಜನರು ವಾಯು ಮಾಲಿನ್ಯದಿಂದ ಮತ್ತು 3,457 ಜನರು ಗೃಹ ಮಾಲಿನ್ಯದಿಂದ ಸಾವನ್ನಪ್ಪುತ್ತಾರೆ ಎಂದು ತಿಳಿದುಬಂದಿದೆ. ಮರ, ಎಲೆಗಳು, ಸಗಣಿ ಸುಡುವುದರಿಂದ ಮತ್ತು ಸೀಮೆಎಣ್ಣೆ ಸ್ಟೌವ್ ಬಳಕೆಯಿಂದ ಗೃಹ ಮಾಲಿನ್ಯ ಹೆಚ್ಚಾಗುತ್ತಿದೆ ಎಂದು ತಿಳಿದು ಬಂದಿದೆ.