ಕರ್ನಾಟಕ

karnataka

ETV Bharat / bharat

ದಟ್ಟ ಅರಣ್ಯದಲ್ಲಿದ್ದ ಉಗ್ರಗಾಮಿ ಅಡಗುತಾಣ ಧ್ವಂಸ ಮಾಡಿದ ಯೋಧರು - ಶ್ರೀನಗರ

ನವಾಬೆಹಕ್ ಕವರಿ ಅರಣ್ಯ ಪ್ರದೇಶದಲ್ಲಿ ಅನುಮಾನಾಸ್ಪದ ಚಲನೆಯ ಬಗ್ಗೆ ಮಾಹಿತಿ ಸಿಕ್ಕ ನಂತರ ಈ ಜಂಟಿ ತಂಡವು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.

Jammu and Kashmir: Militant hideout busted in Lolab forests
ದಟ್ಟ ಅರಣ್ಯದಲ್ಲಿದ್ದ ಉಗ್ರಗಾಮಿ ಅಡಗುತಾಣ ಧ್ವಂಸ ಮಾಡಿದ ಯೋಧರು

By

Published : Jan 16, 2021, 4:19 AM IST

ಶ್ರೀನಗರ: ಸೇನೆಯ 28 ರಾಷ್ಟ್ರೀಯ ರೈಫಲ್ ಮತ್ತು 162 ಬೆಟಾಲಿಯನ್ ಸೆಂಟ್ರಲ್ ರಿಸರ್ವ್ ಪೊಲೀಸ್ ಪಡೆಯ ಜಂಟಿ ತಂಡವು ಕುಪ್ವಾರಾ ಜಿಲ್ಲೆಯ ವಾರ್ನೋ ಲೋಲಾಬ್‌ನ ಅರಣ್ಯ ಪ್ರದೇಶದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಉಗ್ರಗಾಮಿ ಅಡಗುತಾಣವನ್ನು ನಾಶ ಪಡಿಸಿದೆ.

ನವಾಬೆಹಕ್ ಕವರಿ ಅರಣ್ಯ ಪ್ರದೇಶದಲ್ಲಿ ಅನುಮಾನಾಸ್ಪದ ಚಲನೆಯ ಬಗ್ಗೆ ಮಾಹಿತಿ ಸಿಕ್ಕ ನಂತರ ಈ ಜಂಟಿ ತಂಡವು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಕಾರ್ಯಾಚರಣೆ ವೇಳೆ ಉಗ್ರಗಾಮಿಗಳು ಸಂಗ್ರಹಿಸಿಟ್ಟಿದ್ದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳು ಪತ್ತೆಯಾಗಿವೆ.

ದಟ್ಟ ಅರಣ್ಯದಲ್ಲಿದ್ದ ಉಗ್ರಗಾಮಿ ಅಡಗುತಾಣ ಧ್ವಂಸ ಮಾಡಿದ ಯೋಧರು

ಪತ್ತೆಯಾದ ಶಸ್ತ್ರಾಸ್ತ್ರಗಳಲ್ಲಿ ನಾಲ್ಕು ಎಕೆ -47 ಗನ್​, 15 ಸುತ್ತುಗಳ ಎಕೆ -47 ನ ಮದ್ದುಗುಂಡುಗಳು, 2 ಕೈ ಗ್ರೆನೇಡ್‌ಗಳು, ಬೈನಾಕ್ಯುಲರ್‌ಗಳು, ಕಂಪಾಸ್, ವೈರ್ ಕಟ್ಟರ್ ಮತ್ತು ನಕ್ಷೆ ಸೇರಿವೆ.

ABOUT THE AUTHOR

...view details