ಕರ್ನಾಟಕ

karnataka

ETV Bharat / bharat

ಜಮ್ಮುವಿನಲ್ಲಿ ಕಮಲಕ್ಕೆ ಸೈ: ಕಾಶ್ಮೀರದಲ್ಲಿ ಗುಪ್ಕಾರ್​​​​ ಕೂಟ​ಕ್ಕೆ ಜೈಜೈ..!

ದೇಶಾದ್ಯಂತ ಕುತೂಹಲ ಮೂಡಿಸಿದ್ದ ಜಮ್ಮು ಮತ್ತು ಕಾಶ್ಮೀರದ ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆಯ ಫಲಿತಾಂಶ ಬಹುಪಾಲು ಹೊರಬಿದ್ದಿದ್ದು, ಕಾಶ್ಮೀರ ಕಣಿವೆ ಭಾಗದಲ್ಲಿ ಗುಪ್ಕಾರ್​​​ ಕೂಟಕ್ಕೆ ಜಯ ಸಲ್ಲುವ ಸಾಧ್ಯತೆ ಹೆಚ್ಚಿದ್ದು, ಜಮ್ಮು ಭಾಗದಲ್ಲಿ ಬಿಜೆಪಿ ಪಕ್ಷ ಗೆಲುವಿನ ನಿರೀಕ್ಷೆಯಲ್ಲಿದೆ.

Vote Counting
ಸಂಗ್ರಹ ಚಿತ್ರ

By

Published : Dec 22, 2020, 7:39 PM IST

Updated : Dec 22, 2020, 7:59 PM IST

ಜಮ್ಮು ಮತ್ತು ಕಾಶ್ಮೀರ: ಬಹು ಚರ್ಚಿತ ಆರ್ಟಿಕಲ್-370 ಹಾಗೂ ಜಮ್ಮು-ಕಾಶ್ಮೀರದ ಮರು ವಿಂಗಡಣೆಯ ನಂತರ ರಾಜ್ಯದಲ್ಲಿ ಮೊದಲ ಬಾರಿಗೆ ಜಿಲ್ಲಾ ಅಭಿವೃದ್ಧಿ ಮಂಡಳಿ(ಡಿಡಿಸಿ) ಚುನಾವಣೆಯು ನವೆಂಬರ್ 28 ರಿಂದ ಡಿಸೆಂಬರ್ 19 ವರೆಗೆ ಒಟ್ಟು 8 ಹಂತಗಳಲ್ಲಿ ಮತದಾನ ನಡೆದಿದ್ದು, ಇಂದು ಮತದಾರ ಪ್ರಭುವಿನ ತೀರ್ಪು ಹೊರಬಿದ್ದಿದೆ.

ಸಂಗ್ರಹ ಚಿತ್ರ

ಒಟ್ಟು 280 ಕ್ಷೇತ್ರಗಳ ಪೈಕಿ, ಕಾಶ್ಮೀರ ಕಣಿವೆ ವಲಯದಲ್ಲಿ 140 ಸ್ಥಾನ ಹಾಗೂ ಜಮ್ಮು ವಲಯದಲ್ಲಿ 140 ಸ್ಥಾನಗಳನ್ನಾಗಿ ವಿಂಗಡಿಸಲಾಗಿತ್ತು. ಈ ಪೈಕಿ ಕಾಶ್ಮೀರ ಕಣಿವೆ ಭಾಗದ ಮತದಾರರು ಗುಪ್ಕಾರ್ ಮೈತ್ರಿಕೂಟಕ್ಕೆ ಮತ ನೀಡಿ ಪಕ್ಷದ ಮುನ್ನಡೆಗೆ ಕಾರಣವಾದರೆ, ಜಮ್ಮು ಭಾಗದ ಜನರು ಕಮಲ ಅರಳಿಸಲು ನಿರ್ಧರಿಸಿ ಬಿಜೆಪಿ ಪಕ್ಷದ ಮುನ್ನಡೆಗೆ ಕಾರಣರಾಗಿದ್ದಾರೆ.

ಮತ ಎಣಿಕೆ ಪ್ರಕ್ರಿಯೆ

ಈ 280 ಕ್ಷೇತ್ರಗಳ ಪೈಕಿ ಜಮ್ಮು ವಿಭಾಗದ 140 ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷ- 69 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಗುಪ್ಕಾರ್​ ಕೂಟ- 17 ಸ್ಥಾನಗಳನ್ನು ಪಡೆದುಕೊಳ್ಳುವ ಮೂಲಕ ಹಿನ್ನಡೆ ಅನುಭವಿಸಿದ್ದಾರೆ. ಮೊದಲಿನಿಂದಲೂ ಜಮ್ಮುವಿನಲ್ಲಿ ಹಿಡಿತ ಹೊಂದಿರುವ ಕಮಲ ಪಡೆ ಮ್ಯಾಜಿಕ್​ ಮಾಡಿದೆ. ಇನ್ನುಳಿದಂತೆ ಈ ಭಾಗದಲ್ಲಿ ಕಾಂಗ್ರೆಸ್-​​16 ಸ್ಥಾನ, ಜೆಕೆಎಪಿ-02 ಸ್ಥಾನ ಹಾಗೂ ಪಕ್ಷೇತರ ಅಭ್ಯರ್ಥಿಗಳು- 36 ಕ್ಷೇತ್ರಗಳಲ್ಲಿ ಮನ್ನಡೆಯಲ್ಲಿದ್ದಾರೆ.

ಇನ್ನುಳಿದಂತೆ ಕಾಶ್ಮೀರ ಕಣಿವೆಯ 140 ಕ್ಷೇತ್ರಗಳಲ್ಲಿ ಗುಪ್ಕಾರ್​ ಕೂಟ -81 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ ಪಕ್ಷ ಕೇವಲ-03 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಳ್ಳುವ ಮೂಲಕ ಅಲ್ಪತೃಪ್ತಗೊಂಡಿದೆ. ಇನ್ನುಳಿದಂತೆ ಈ ಭಾಗದಲ್ಲಿ ಕಾಂಗ್ರೆಸ್-​09, ಜೆಕೆಎಪಿ-10 ಹಾಗೂ 35 ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಜಯದ ಬೆನ್ನೇರಿದ್ದಾರೆ. ಇನ್ನುಳಿದಂತೆ ಇನ್ನೆರಡು ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಬೇಕಿದೆ.

ಇಂದು ಬೆಳಗ್ಗೆ 9 ಗಂಟೆಯಿಂದ ಬಿಗಿ ಬಂದೋಬಸ್ತ್​​ನೊಂದಿಗೆ ಸೆಕ್ಷೆನ್​​-144 ಜಾರಿ ಮಾಡುವ ಮೂಲಕ ಶ್ರೀನಗರದಲ್ಲಿ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಮಧ್ಯಾಹ್ನ 12 ಗಂಟೆ ವೇಳೆಗೆ ಭಾರತೀಯ ಜನತಾ ಪಾರ್ಟಿ 46 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಗುಪ್ಕಾರ್ ಮೈತ್ರಿಕೂಟ - 44 ಹಾಗೂ ಕಾಂಗ್ರೆಸ್​​ ಪಕ್ಷ-15 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತ್ತು. ಇನ್ನು ಮದ್ಯಾಹ್ನ 3 ಗಂಟೆ ಸಮಯದಲ್ಲಿಗುಪ್ಕಾರ್ ಮೈತ್ರಿಕೂಟ ಬಿಜೆಪಿಯನ್ನು ಹಿಂದಿಕ್ಕುವ ಮೂಲಕ - 88 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಭಾಜಪ - 46 ಕ್ಷೇತ್ರಗಳ ಮುನ್ನಡೆಯಲ್ಲೇ ಸ್ಥಗಿತಗೊಂಡಿತ್ತು. ಇನ್ನು ಕಾಂಗ್ರೆಸ್​​-6 ಕ್ಷೇತ್ರಗಳ ಮುನ್ನಡೆಯೊಂದಿಗೆ ಒಟ್ಟು-21 ಕ್ಷೇತ್ರಗಳಲ್ಲಿ ಮುನ್ನಡೆಗೆ ಬಂದಿದ್ದು, ಇನ್ನುಳಿದ ಕ್ಷೇತ್ರಗಳಲ್ಲಿ 40ಕ್ಕೂ ಹೆಚ್ಚು ಪಕ್ಷೇತರ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದರು.

ಕಾಶ್ಮೀರ ಕಣಿವೆ ಭಾಗದಲ್ಲಿ ಗುಪ್ಕಾರ್​ ಕೂಟ ಮೇಲುಗೈ ಸಾಧಿಸಿದ್ದರೆ, ಜಮ್ಮು ಭಾಗದಲ್ಲಿ ಬಿಜೆಪಿ ಸಾರಥ್ಯ ವಹಿಸಿತ್ತು. ಸಂಜೆ 5 ಗಂಟೆ ವೇಳೆಗೆ ಕಾಶ್ಮೀರ ಕಣಿವೆಯ -140 ಕ್ಷೇತ್ರಗಳಲ್ಲಿ ಗುಪ್ತಾರ್​​ ಕೂಟ-73 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ ಕೇವಲ - 4 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿತ್ತು. ಇನ್ನು ಜೆಕೆಎಪಿ ಪಕ್ಷ-09, ಕಾಂಗ್ರೆಸ್​​-10 ಹಾಗೂ ಪಕ್ಷೇತರ ಅಭ್ಯರ್ಥಿಗಳು-40 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಜಯದ ಕುದುರೆಯ ಬೆನ್ನೇರಿ ಹೊರಟಿದ್ದರು.

ಇನ್ನು, ಇದೇ ಸಮಯದಲ್ಲಿ ಜಮ್ಮು ವಲಯದಲ್ಲಿ ಬಿಜೆಪಿ ಬರೋಬ್ಬರಿ 72 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಗುಪ್ಕಾರ್​ ಕೂಟ - 22 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಭಾಜಪದಿಂದ ಭಾರಿ ಅಂತರ ಕಾಯ್ದುಕೊಂಡಿತ್ತು. ಇನ್ನುಳಿದಂತೆ ಈ ಭಾಗದಲ್ಲಿ ಜೆಕೆಎಪಿ-1, ಕಾಂಗ್ರೆಸ್​-13 ಹಾಗೂ ಪಕ್ಷೇತರ ಅಭ್ಯರ್ಥಿಗಳು-32 ಕ್ಷೇತ್ರಗಳಲ್ಲಿ ಮುಂದಿದ್ದರು.

ಒಟ್ಟು 8 ಹಂತದಲ್ಲಿ ಜಮ್ಮು ಮತ್ತು ಕಾಶ್ಮೀರ ಕಣಿವೆಯ 280 ಜಿಲ್ಲಾ ಅಭಿವೃದ್ಧಿ ಮಂಡಳಿಯ ಸೀಟುಗಳಿಗೆ ಮತದಾನ ನಡೆದಿದ್ದು, 450 ಮಹಿಳೆಯರು ಸೇರಿದಂತೆ 2,200 ಅಭ್ಯರ್ಥಿಗಳು ಚುನಾವಣ ಕಣದಲ್ಲಿ ಸ್ಪರ್ಧಿಸಿದ್ದರು. ಈ ಪೈಕಿ 43 ಕ್ಷೇತ್ರದಲ್ಲಿ ಮೊದಲ ಹಂತದ ಚುನಾವಣೆ ನಡದಿದ್ದು, ಜಮ್ಮುವಿನ ರಿಯಾಸಿಯಲ್ಲಿ ಅತ್ಯಧಿಕ ಅಂದರೆ ಶೇ.74.62ರಷ್ಟು ಮತದಾನವಾಗಿತ್ತು. ಉಗ್ರರ ಉಪಟಳ ಹೆಚ್ಚಾಗಿರುವ ಪುಲ್ವಾಮಾದಲ್ಲಿ ಕೇವಲ ಶೇ.6.7ರಷ್ಟು ಮಾತ್ರ ಮತದಾನವಾಗಿತ್ತು.

Last Updated : Dec 22, 2020, 7:59 PM IST

ABOUT THE AUTHOR

...view details