ಅನಂತನಾಗ್ (ಜಮ್ಮು ಮತ್ತು ಕಾಶ್ಮೀರ): ಕ್ಯಾಬ್ನಲ್ಲಿ ಪ್ರವಾಸಿಗರು ಮರೆತು ಹೋಗಿದ್ದ ಸುಮಾರು 10 ಲಕ್ಷ ರೂ ಮೌಲ್ಯದ ಚಿನ್ನಾಭರಣವನ್ನು ಜಮ್ಮು ಮತ್ತು ಕಾಶ್ಮೀರದ ಚಾಲಕರೊಬ್ಬರು ಮರಳಿ ಅದರ ವಾರಸುದಾರರಿಗೆ ತಲುಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಹೈದರಾಬಾದ್ನಿಂದ ಪ್ರವಾಸಿಗರು ಅನಂತನಾಗ್ ಜಿಲ್ಲೆಯ ಪಹಲ್ಗಾಮ್ಗೆ ಪ್ರವಾಸಕ್ಕೆಂದು ಬಂದಿದ್ದರು. ಈ ಸಂದರ್ಭದಲ್ಲಿ ಅವರು ಟ್ಯಾಕ್ಸಿ ಚಾಲಕ ಆಕಾಶ್ ಫಾರೂಕ್ ವಾನಿ ಎಂಬವರ ಕಾರಿನಲ್ಲಿ ಸುತ್ತಾಡಿದ್ದಾರೆ. ಕಾರು ಇಳಿದು ಹೋಗಬೇಕಾದರೆ ಪ್ರವಾಸಿಗರು ತಮ್ಮ ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ಕಾರಿನಲ್ಲೇ ಬಿಟ್ಟು ಹೋಗಿದ್ದರು ಎಂದು ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಅಬ್ದುಲ್ ರಶೀದ್ ವಾನಿ ತಿಳಿಸಿದ್ದಾರೆ.