ಕರ್ನಾಟಕ

karnataka

ETV Bharat / bharat

ಅಮರನಾಥ ಗುಹಾ ದೇವಾಲಯದ ಬಳಿ ಹಿಮಪಾತ: ಹಿಮಾವೃತವಾದ ಬೆಟ್ಟಗಳು

ಜಮ್ಮು ಕಾಶ್ಮೀರದ ಅನಂತನಾಗ್​ನಲ್ಲಿರುವ ಅಮರನಾಥದಲ್ಲಿ ಹಿಮಪಾತವಾಗಿದ್ದು, ಅಮರನಾಥ ಜಿ ದೇಗುಲ ಮಂಡಳಿ ಟ್ವಿಟರ್​ನಲ್ಲಿ ಮಾಹಿತಿ ನೀಡಿದೆ.

Jammu & Kashmir | Amarnath Cave Temple in Anantnag receives snowfall today
ಅಮರನಾಥ ಗುಹಾ ದೇವಾಲಯದ ಬಳಿ ಹಿಮಪಾತ: ಹಿಮಚ್ಛಾದಿತವಾದ ಬೆಟ್ಟಗಳು

By

Published : Oct 3, 2021, 11:51 AM IST

ಅನಂತನಾಗ್(ಜಮ್ಮು ಕಾಶ್ಮೀರ):ಹಿಂದೂ ಧಾರ್ಮಿಕ ಕ್ಷೇತ್ರ ಅಮರನಾಥ ಗುಹಾ ದೇವಾಲಯದ ಬಳಿ ಇಂದು ಹಿಮಪಾತವಾಗಿದ್ದು, ಶ್ರೀ ಅಮರನಾಥ ಜಿ ದೇಗುಲ ಮಂಡಳಿ ಸಾಮಾಜಿಕ ಜಾಲತಾಣದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ.

ಮಳೆ ಮತ್ತು ಹಿಮಪಾತ ಇಲ್ಲಿ ಸಾಮಾನ್ಯವಾಗಿದ್ದು, ಪ್ರಸ್ತುತ ದಟ್ಟವಾದ ಹಿಮಚ್ಛಾದಿತ ಬೆಟ್ಟಗಳು ಎಲ್ಲೆಡೆ ಕಂಡುಬಂದಿವೆ. ಸದ್ಯಕ್ಕೆ 8 ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶವಿದ್ದು, ವಾತಾವರಣ ನಯನ ಮನೋಹರವಾಗಿದೆ.

ಕೋವಿಡ್ ಕಾರಣಕ್ಕೆ 2021ರ ಅಮರನಾಥ ಯಾತ್ರೆಯನ್ನು ರದ್ದು ಮಾಡಲಾಗಿದ್ದು, ಆನ್​ಲೈನ್ ಮೂಲಕ ಭಕ್ತರು ಅಮರನಾಥನ ದರ್ಶನ ಪಡೆಯಬಹುದು ಎಂದು ಅಮರನಾಥ ಜಿ ದೇಗುಲ ಮಂಡಳಿ ಆಗಸ್ಟ್​ನಲ್ಲಿ ಹೇಳಿತ್ತು.

ABOUT THE AUTHOR

...view details