ಜಮ್ಮು ಮತ್ತು ಕಾಶ್ಮೀರ:ಭಯೋತ್ಪಾದನೆಗೆ ಧನಸಹಾಯ ಮತ್ತು ಬೆದರಿಕೆಯೊಡ್ಡಿದ ಆರೋಪದ ಮೇಲೆ ನಾಲ್ವರು ಅಧಿಕಾರಿಗಳನ್ನು ವಜಾಗೊಳಿಸಲಾಗಿದೆ. ಇದರಲ್ಲಿ ಉಗ್ರ ಸಂಘಟನೆಯಾದ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲಾವುದ್ದೀನ್ ಅವರ ಪುತ್ರ ಕೂಡ ಇದ್ದಾನೆ. ಜಮ್ಮು ಕಾಶ್ಮೀರ ಆಡಳಿತ ಈ ಬಗ್ಗೆ ಆದೇಶ ಹೊರಡಿಸಿದೆ.
ಐಎಎಸ್ ಕೇಡರ್ ಮಾದರಿ ಅಧಿಕಾರಿಯಾಗಿ ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡುತ್ತಿದ್ದ ಬಿಟ್ಟಾ ಕರಾಟೆ ಪತ್ನಿ ಅಸ್ಸಾಬಾ ಉಕ್ ಅರ್ಜಮಂದ್ ಖಾನ್, ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಮುಖ್ಯಸ್ಥ ಸೈಯದ್ ಸಲಾವುದ್ದೀನ್ ಪುತ್ರ ಸೈಯದ್ ಅಬ್ದುಲ್ ಮುಯೀದ್, ಕಾಶ್ಮೀರ ವಿಶ್ವವಿದ್ಯಾನಿಲಯದ ಹಿರಿಯ ಸಹಾಯಕ ಪ್ರಾಧ್ಯಾಪಕ ಮಾಜಿದ್ ಹುಸೇನ್ ಖಾದ್ರಿ ಮತ್ತು ಹಿರಿಯ ವಿಜ್ಞಾನಿ ಮುಹೀತ್ ಅಹ್ಮದ್ ಭಟ್ ಎಂಬವರನ್ನು ವಜಾಗೊಳಿಸಲಾಗಿದೆ.