ಕರ್ನಾಟಕ

karnataka

ETV Bharat / bharat

ಬಾಂಬ್ ಸ್ಫೋಟ ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲು ಜಮೈತ್ ಉಲೇಮಾ ಇ ಹಿಂದ್ ನಿರ್ಧಾರ - ಬಾಂಬ್ ಸ್ಫೋಟ ಸಂಬಂಧ ಕೋರ್ಟ ಆದೇಶ ಪ್ರಶ್ನಿಸಲಿರುವ ಜಮೈತ್ ಉಲೇಮಾ ಇ ಹಿಂದ್

ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ವಿಶೇಷ ಕೋರ್ಟ್ ವಿಧಿಸಿರುವ ಗಲ್ಲು ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್​ಗೆ ಹೋಗಲು ಜಮೈತ್ ಉಲೇಮಾ ಇ ಹಿಂದ್ ನಿರ್ಧರಿಸಿದೆ.

ಅಹಮದಾಬಾದ್ ಬಾಂಬ್ ಸ್ಫೋಟ ಪ್ರಕರಣ
ಅಹಮದಾಬಾದ್ ಬಾಂಬ್ ಸ್ಫೋಟ ಪ್ರಕರಣ

By

Published : Feb 20, 2022, 8:35 AM IST

ಸಹರಾನ್ಪುರ್ (ಉತ್ತರ ಪ್ರದೇಶ): 2008 ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 38 ಅಪರಾಧಿಗಳಿಗೆ ಗುಜರಾತ್ ವಿಶೇಷ ನ್ಯಾಯಾಲಯ ನೀಡಿರುವ ಗಲ್ಲು ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್ ಹಾಗೂ ಅಗತ್ಯಬಿದ್ದರೆ ಸುಪ್ರೀಂಕೋರ್ಟ್‌ಗೂ ಹೋಗುವುದಾಗಿ ಜಮೈತ್ ಉಲೇಮಾ ಇ ಹಿಂದ್ ಅಧ್ಯಕ್ಷ ಮೌಲಾನಾ ಅರ್ಶದ್ ಮದನಿ ತಿಳಿಸಿದ್ದಾರೆ.

ಕೋರ್ಟ್ ಆದೇಶವನ್ನು ನಂಬಲಾಗ್ತಿಲ್ಲ. ಕಾನೂನು ಹೋರಾಟ ಮುಂದುವರಿಸುತ್ತೇವೆ. ಶಿಕ್ಷೆ ಆದವರಿಗೆ ಖಂಡಿತವಾಗಿಯೂ ಹೈಕೋರ್ಟ್​ನಲ್ಲಿ ನ್ಯಾಯ ಸಿಗುತ್ತದೆ. ಕೆಳ ನ್ಯಾಯಾಲಯಗಳಲ್ಲಿ ಶಿಕ್ಷೆಗೆ ಗುರಿಯಾದವರು ಹೈಕೋರ್ಟ್​ ಹಾಗೂ ಸುಪ್ರೀಂಕೋರ್ಟ್​ನಲ್ಲಿ ಖುಲಾಸೆಗೊಂಡ ಉದಾಹರಣೆಗಳು ಬಹಳಷ್ಟಿವೆ ಎಂದು ಅವರು ಹೇಳಿದ್ದಾರೆ.

ಜಮೈತ್ ಉಲೇಮಾ ಇ ಹಿಂದ್ ಅಧ್ಯಕ್ಷ ಮೌಲಾನಾ ಅರ್ಶದ್ ಮದನಿ ಹೇಳಿದ್ದೇನು?

2002ರ ದೆಹಲಿ ಅಕ್ಷರಧಾಮ ದೇವಾಲಯ ದಾಳಿ ಪ್ರಕರಣದಲ್ಲಿ ಕೆಳ ನ್ಯಾಯಾಲಯವು ಮೂವರಿಗೆ ಗಲ್ಲು ಮತ್ತು ನಾಲ್ವರಿಗೆ ಜೀವಾವಧಿ ಶಿಕ್ಷೆ ನೀಡಿತ್ತು. ಇದನ್ನು ಹೈಕೋರ್ಟ್ ಕೂಡ ಎತ್ತಿ ಹಿಡಿದಿತ್ತು. ಆದ್ರೆ ಸುಪ್ರೀಂಕೋರ್ಟ್​ನಲ್ಲಿ ಇವರು ಖುಲಾಸೆಗೊಂಡರು. ಜೊತೆಗೆ ಸುಳ್ಳು ಪ್ರಕರಣ ದಾಖಲಿಸಿದ ಪೊಲೀಸರಿಗೆ ಕೋರ್ಟ್ ಛೀಮಾರಿ ಹಾಕಿತ್ತು. ಆದ್ದರಿಂದ ಅಗತ್ಯಬಿದ್ರೆ ಸುಪ್ರೀಂಕೋರ್ಟ್‌ಗೂ ಹೋಗುತ್ತೇವೆ ಎಂದು ಮದನಿ ಹೇಳಿದರು.

2008ರಲ್ಲಿ ಗುಜರಾತ್‌ನ ಅಹಮಾದಾಬಾದ್‌ನಲ್ಲಿ ಸಂಭವಿಸಿದ ಭೀಕರ ಬಾಂಬ್‌ ಸ್ಫೋಟದ 38 ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆಯೇ ಸೂಕ್ತ. ಈ ಅಪರಾಧಿಗಳನ್ನು ಸಮಾಜದಲ್ಲಿರಲು ಬಿಡುವುದೆಂದರೆ ಅದು ಮನುಷ್ಯರನ್ನು ತಿನ್ನುವ ಚಿರತೆಯನ್ನು ಸಾರ್ವಜನಿಕವಾಗಿ ತಿರುಗಲು ಬಿಟ್ಟಂತೆ. ಏಕೆಂದರೆ, ಅದಕ್ಕೆ ಯಾವುದೇ ಕನಿಕರ ಇರಲಾರದು. ಅದು ಮುಗ್ಧ ಮಕ್ಕಳು, ಅಮಾಯಕ ಯುವಜನತೆ ಹಾಗು ವೃದ್ಧರು ಅಥವಾ ಇತರೆ ಜಾತಿ, ಧರ್ಮದ ಜನರನ್ನು ನಿರ್ದಯವಾಗಿ ತಿಂದು ಮುಗಿಸುತ್ತದೆ ಎಂದು ವಿಶೇಷ ನ್ಯಾಯಾಲಯ ತನ್ನ ಆದೇಶದಲ್ಲಿ ಶುಕ್ರವಾರ ತಿಳಿಸಿತ್ತು.

ದೇಶದಲ್ಲಿ ಸಂಚಲನ ಸೃಷ್ಟಿಸಿದ ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಇಲ್ಲಿನ ವಿಶೇಷ ನ್ಯಾಯಾಲಯವು ಬಾಂಬ್‌ ಸ್ಫೋಟದ ರೂವಾರಿಗಳಾದ ಪಾಕಿಸ್ತಾನ ಬೆಂಬಲಿತ ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ 38 ಅಪರಾಧಿಗಳಿಗೆ ಶುಕ್ರವಾರ ಗಲ್ಲು ಶಿಕ್ಷೆ ವಿಧಿಸಿ ಮಹತ್ವದ ಆದೇಶ ನೀಡಿತ್ತು. ಒಂದು ಪ್ರಕರಣದಲ್ಲಿ ಇಷ್ಟು ಮಂದಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ನೀಡಿದ್ದು ದೇಶದಲ್ಲಿ ಇದು ಮೊದಲ ಸಲ ಎನ್ನುವುದು ಗಮನಾರ್ಹ ಸಂಗತಿ.

ಇದನ್ನೂ ಓದಿ: ಬಾಂಬ್‌ ಸ್ಫೋಟದ ಅಪರಾಧಿಗಳನ್ನು ಬಿಡುವುದು, ಮನುಷ್ಯರನ್ನು ತಿನ್ನುವ ಚಿರತೆಯನ್ನು ಸಾರ್ವಜನಿಕವಾಗಿ ಬಿಡುವುದಕ್ಕೆ ಸಮ: ಕೋರ್ಟ್‌

ABOUT THE AUTHOR

...view details