ಕರ್ನಾಟಕ

karnataka

ETV Bharat / bharat

ಕೋವಿಡ್​ಗೆ ಬಲಿಯಾದ ಸಹಾಯಕ ಪ್ರಾಧ್ಯಾಪಕಿ ನಬಿಲಾ - 38 ವರ್ಷದ ನಬಿಲಾ

ಕೋವಿಡ್ ಮಹಾಮಾರಿಗೆ ಕೇವಲ 38 ವರ್ಷದ ಸಹಾಯಕ ಪ್ರಾಧ್ಯಾಪಕಿಯೊಬ್ಬರು ಬಲಿಯಾಗಿದ್ದು, ಸ್ನೇಹಿತರು ಹಾಗೂ ವಿದ್ಯಾರ್ಥಿಗಳಲ್ಲಿ ಬರ ಸಿಡಿಲು ಬಡಿದಂತಾಗಿದೆ.

Jamia professor
Jamia professor

By

Published : May 19, 2021, 5:11 PM IST

ಫರಿದಾಬಾದ್​(ಹರಿಯಾಣ): ಮಹಾಮಾರಿ ಕೊರೊನಾ ಸೋಂಕಿಗೊಳಗಾಗಿದ್ದ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ನಬಿಲಾ ಇದೀಗ ಸಾವನ್ನಪ್ಪಿದ್ದಾರೆ.

ಕಳೆದ ಕೆಲ ದಿನಗಳಿಂದ ಸೋಂಕಿನಿಂದ ಬಳಲುತ್ತಿದ್ದ ಅವರನ್ನ ಮೊದಲು ಓಖ್ಲಾದ ಅಲ್ ​ ​-ಶಿಫಾ- ಆಸ್ಪತ್ರೆಗೆ ದಾಖಲು ಮಾಡಿದ್ದರು. ಆಸ್ಪತ್ರೆಯಲ್ಲಿ ಚೇತರಿಕೆ ಕಾಣಿಸಿಕೊಳ್ಳದ ಕಾರಣ ಫರಿದಾಬಾದ್​ನ ಫೋರ್ಟಿಸ್​​ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇದೀಗ ಸಾವನ್ನಪ್ಪಿದ್ದಾರೆ.

ಪ್ರಾಧ್ಯಾಪಕಿ ಡಾ. ನಬಿಲಾ

ಇದರ ಮಧ್ಯೆ ತನಗಾಗಿ ಐಸಿಯು ಬೆಡ್​ ಕೊಡಿಸುವಂತೆ ಕೇಳಿ ಮೇ. 4ರಂದು ಟ್ವಿಟ್ ಮಾಡಿದ್ದರು. 38 ವರ್ಷದ ನಬಿಲಾ, ಕೋವಿಡ್​ನಿಂದಾಗಿ ಖಿನ್ನತೆಗೊಳಗಾಗಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಹಲೋ, ಲಾಕ್​ಡೌನ್​ ಇದೆ, ಎಲ್ಲಿಗೆ ಹೋಗ್ತಿದ್ದೀರಿ, ಜಿಲ್ಲಾಧಿಕಾರಿಯನ್ನೇ ನಿಲ್ಲಿಸಿ ಪ್ರಶ್ನಿಸಿದ ಪೇದೆ!

ನಬಿಲಾ ತಾಯಿಗೂ ಕೋವಿಡ್ ಸೋಂಕು ದೃಢಗೊಂಡಿದ್ದ ಕಾರಣ ದೆಹಲಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಇದರ ಬಗ್ಗೆ ನಬಿಲಾಗೆ ಮಾಹಿತಿ ನೀಡಿರಲಿಲ್ಲ.

ನಬಿಲಾ ಕುಟುಂಬದಲ್ಲಿ ಇದೀಗ 80 ವರ್ಷ ಮೇಲ್ಪಟ್ಟ ತಂದೆ ಮಾತ್ರ ಇದ್ದು, ಅಮೆರಿಕದಲ್ಲಿ ಅವರ ಸಹೋದರ ವಾಸ ಮಾಡುತ್ತಿದ್ದಾರೆ. ನಬಿಲಾ ಹಠಾತ್​ ಸಾವು ಅವಳ ಸ್ನೇಹಿತರು ಹಾಗೂ ವಿದ್ಯಾರ್ಥಿಗಳಲ್ಲಿ ಬರ ಸಿಡಿಲು ಬಡಿದಂತಾಗಿದೆ. ನಬಿಲಾ ಆರೋಗ್ಯದಲ್ಲಿ ಏರು ಪೇರು ಕಂಡು ಬಂದಿದೆ ಎಂದು ತಿಳಿಯುತ್ತಿದ್ದಂತೆ ವಿವಿಯ ಎಂಎ ವಿದ್ಯಾರ್ಥಿ ಲಾರಿಬ್​ ಹಾಗೂ ಕೆಲ ಸ್ನೇಹಿತರು ಮನೆಗೆ ತೆರಳಿ ಅವರಿಗೆ ಸಹಾಯ ಮಾಡಿದ್ದರು.

ABOUT THE AUTHOR

...view details