ಕರ್ನಾಟಕ

karnataka

ETV Bharat / bharat

ನೋಟ್​ ಬ್ಯಾನ್​ ಸಂದರ್ಭದಲ್ಲಿ ನೂರು ರೂಪಾಯಿಗಾಗಿ ಸಹೋದ್ಯೋಗಿಯ ಕೊಲೆ : ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್​ - ETV Bharath Kannada news

ನೂರು ರೂಪಾಯಿ ಹಣವನ್ನು ಹಿಂತಿರುಗಿಸದೇ ಸತಾಯಿಸುತ್ತಿದ್ದ ಎಂಬ ಕಾರಣಕ್ಕೆ ಸಹೋದ್ಯೋಗಿಯ ಕೊಲೆ ಮಾಡಿದಾತನಿಗೆ ಪಶ್ಚಿಮ ಬಂಗಾಳದ ಜಲ್ಪೈಗುರಿಯ ಜಿಲ್ಲಾ ಕೋರ್ಟ್​ ಜೀವಾವಧಿ ಶಿಕ್ಷೆ ವಿಧಿಸಿದೆ.

jalpaiguri man gets life sentence for killing his friend for rs 100
ನೋಟ್​ ಬ್ಯಾನ್​ ಸಂದರ್ಭದಲ್ಲಿ ನೂರು ರೂಪಾಯಿಗಾಗಿ ಸಹೋದ್ಯೋಗಿಯ ಕೊಲೆ : ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್​

By

Published : May 19, 2023, 10:50 PM IST

ಜಲ್ಪೈಗುರಿ (ಪಶ್ಚಿಮ ಬಂಗಾಳ): ಕೇವಲ 100 ರೂ. ತನಗೆ ಕೊಡಬೇಕಾದದ್ದು ಸಿಗಲಿಲ್ಲ ಎಂಬ ಕಾರಣಕ್ಕೆ ತನ್ನ ಸಹೋದ್ಯೋಗಿಯನ್ನು ಕೊಂದಿದ್ದಾನೆ. ಈ ಅಪರಾಧಕ್ಕಾಗಿ ಗೋಬಿನ್ ಓರಾವ್ ಎಂಬ ವ್ಯಕ್ತಿಗೆ ಕೋರ್ಟ್​ ಜೀವಾವಧಿ ಶಿಕ್ಷೆ ನೀಡಿದೆ. ಪದೇ ಪದೆ ಮನವಿ ಮಾಡಿದರೂ 100 ರೂಪಾಯಿ ಸಿಗಲಿಲ್ಲ. ಜೊತೆಗೆ ನೂರ್ ಇಸ್ಲಾಂ ಹಣ ಕೇಳಿದಾಗಲೆಲ್ಲಾ 500 ರೂಪಾಯಿ ನೋಟು ತೋರಿಸುತ್ತಿದ್ದ. ನೋಟು ರದ್ದತಿ ಸಂದರ್ಭದಲ್ಲಿ ಹಲವು ಬಾರಿ ಹಣ ಕೇಳಿದರೂ ನೂರ್ ಹಣ ನೀಡಿರಲಿಲ್ಲ.

ಕೋಪದಲ್ಲಿ ಗೋಬಿನ್ ಓರಾವ್ ನೂರ್ ನನ್ನು ಚಾಕುವಿನಿಂದ ಕೊಂದಿದ್ದ. ಆ ಅಪರಾಧಕ್ಕಾಗಿ ಹೆಚ್ಚುವರಿ ಜಿಲ್ಲಾ ಫಾಸ್ಟ್ ಟ್ರ್ಯಾಕ್ ಫಾಸ್ಟ್ ಕೋರ್ಟ್‌ನ ನ್ಯಾಯಾಧೀಶರು ಗುರುವಾರ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ.

ಏನಿದು ಘಟನೆ?:ನೂರ್ ಇಸ್ಲಾಂ ಮತ್ತು ಗೋಬಿನ್ ಓರಾವ್ ತೀಸ್ತಾ ನದಿಯ ಉದ್ದಕ್ಕೂ ಪ್ರೇಮ್‌ಗಂಜ್‌ನ ಚಾರ್ ಪ್ರದೇಶದಲ್ಲಿ ಎಮ್ಮೆ ಸಾಕಣಿಕಾ ಜಾಗದಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ನೂರ್ ಪಹರಪುರ ಚೌರಂಗಿ ನಿವಾಸಿಯಾಗಿದ್ದರು. 2016ರ ನವೆಂಬರ್ 13ರ ರಾತ್ರಿ ಎಂದಿನಂತೆ ನೂರ್ ಇಸ್ಲಾಂ ಎಮ್ಮೆಗಳ ಹಿಂಡಿನ ಕಾವಲು ಕಾಯಲು ತೀಸ್ತಾ ನದಿ ದಾಟಿ ಪ್ರೇಮ್ ಗಂಜ್​ಗೆ ತೆರಳಿದ್ದರು. ಮರುದಿನ ಬೆಳಗ್ಗೆ ಅಂದರೆ 14ರಂದು ಮನೆಗೆ ಬರಲು ತಡವಾದ ಕಾರಣ ನೂರ್ ಇಸ್ಲಾಂ ಅವರ ಮನೆಯವರು ಹುಡುಕಾಟ ಆರಂಭಿಸಿದ್ದರು. ಈ ವೇಳೇ ನೂರ್ ರಕ್ತಸಿಕ್ತ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬಂತು. ದೇಹದ ಮೇಲೆ ಹಲವಾರು ಗಾಯದ ಗುರುತುಗಳಿದ್ದವು..

ಬಳಿಕ ನೂರ್ ಕುಟುಂಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆ ದೂರಿನ ಆಧಾರದ ಮೇಲೆ ಜಲ್ಪೈಗುರಿ ಕೋಟ್ಯಾಲಿ ಪೊಲೀಸ್ ಠಾಣಾಧಿಕಾರಿ ಶಿಬು ಕರ್ ಕೊಲೆಯ ತನಿಖೆ ಆರಂಭಿಸಿದರು. ಕೋಟ್ಯಾಲಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 302 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯ ವೇಳೆ ಅಧಿಕಾರಿ ಶಿಬು ಕರ್ ಅವರು ಗೋಬಿನ್ ಓರಾವ್ ಅವರನ್ನು ಶಂಕಿಸಿದ್ದಾರೆ. ವಿಚಾರಣೆಯಲ್ಲಿ ಗೋಬಿನ್ ನೂರ್ ಇಸ್ಲಾಂನನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದ. ಈ ವೇಳೆ ಕೊಡಬೇಕಿ ಬಾಕಿ ನೂರು ರೂಪಾಯಿಗಾಗಿ ಕೊಂದದ್ದಾಗಿ ಹೇಳಿಕೆ ನೀಡಿದ್ದ.

ಪೋಲೀಸರ ವಿಚಾರಣೆಯಲ್ಲಿ ಗೋಬಿನ್ ಓರಾ" ಹಣದ ಅವಶ್ಯಕತೆ ಇತ್ತು. ನಾನು ಕೊಟ್ಟಿದ್ದ 100 ರೂ ಕೇಳಿದಾಗಲೆಲ್ಲಾ ಸತಾಯಿಸುತ್ತಿದ್ದ. ಹೀಗಾಗಿ ಕೋಪದಿಂದ ಕೊಡಲಿಯಿಂದ ಹೊಡೆದೆ. ನಂತರ ಆತನನ್ನು ಬದುಕಿಸಲು ಪ್ರಯತ್ನಿಸಿದೆ. ಆದರೆ ಸಾಧ್ಯವಾಗಲಿಲ್ಲ" ಎಂದು ಹೇಳಿಕೆ ಕೊಟ್ಟಿದ್ದ.

ಜಲ್ಪೈಗುರಿಯ ಹಾಲಿ ಪೊಲೀಸ್ ವರಿಷ್ಠಾಧಿಕಾರಿ ಉಮೇಶ್ ಗಣಪತ್ ಅವರು, ಶಿಬು ಅವರು ತನಿಖೆಯನ್ನು ಪೂರ್ಣಗೊಳಿಸಿ, ಸಮಯಕ್ಕೆ ಸರಿಯಾಗಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ಈ ಬಗ್ಗೆ ಜಲ್ಪೈಗುರಿ ಹೆಚ್ಚುವರಿ ಜಿಲ್ಲಾ ಫಾಸ್ಟ್ ಟ್ರ್ಯಾಕ್ ಫಾಸ್ಟ್ ಕೋರ್ಟ್ ವಿಚಾರಣೆ ನಡೆಸಿತ್ತು. ಕೇಸ್​ನ ಸಮಗ್ರ ವಿಚಾರಣೆ ನಡೆಸಿದ ನ್ಯಾಯಾಧೀಶ ರಿಂತು ಸುರ್ ಅವರು ಗುರುವಾರ ಗೋಬಿನ್ ಓರಾವ್ ಅವರಿಗೆ ಜೀವಾವಧಿ ಶಿಕ್ಷೆ ಮತ್ತು 20,000 ದಂಡ ವಿಧಿಸಿದ್ದಾರೆ. ಇದೇ ವೇಳೆ ನೂರ್ ಇಸ್ಲಾಂ ಕುಟುಂಬಕ್ಕೆ 3 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ.

ಇದನ್ನೂ ಓದಿ:ಸ್ನೇಹಿತೆಯನ್ನು ತಬ್ಬಿಕೊಂಡೇ ಗುಂಡಿಕ್ಕಿ, ತಾನೂ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ!

ABOUT THE AUTHOR

...view details