ವಾಷಿಂಗ್ಟನ್: ಅಮೆರಿಕ ಪ್ರವಾಸದಲ್ಲಿರುವ ಭಾರತೀಯ ವಿದೇಶಾಂಗ ಸಚಿವ ಎಸ್.ಜೈಶಂಕರ್ ಲಸಿಕೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದು, ‘ರಾಜಕೀಯ ರಾಜಕಾರಣ’ದಲ್ಲಿ ಭಾಗಿಯಾಗಲು ಇಷ್ಟಪಡುವುದಿಲ್ಲ ಎಂದಿದ್ದಾರೆ.
ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರೊಂದಿಗಿನ ಭೇಟಿಯ ನಂತರ ಮಾಧ್ಯಮಗಳ ಉದ್ದೇಶಿಸಿ ಮಾತನಾಡಿದ ಜೈಶಂಕರ್, ಪ್ರತಿಪಕ್ಷಗಳ ಬಗ್ಗೆ, ಅದರಲ್ಲೂ ವಿಶೇಷವಾಗಿ ರಾಹುಲ್ ಗಾಂಧಿಯವರ 'ಲಸಿಕೆ ರಾಜತಾಂತ್ರಿಕತೆ' ಟೀಕೆಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿಲು ನಿರಾಕರಿಸಿದರು.
ಇದು ಅಮೆರಿಕದ ಭೇಟಿ, ನಾವು ಗಂಭೀರ ವಿಷಯದ ಚರ್ಚೆಯಲ್ಲಿದ್ದೇವೆ. ರಾಜಕೀಯ ವಿನಿಮಯ ಮಾಡಿಕೊಳ್ಳಲು ನಾನು ಇಲ್ಲಿಲ್ಲ. ನಾನು ವಿದೇಶ ಪ್ರವಾಸದಲ್ಲಿ ಆ ರೀತಿ ಎಂದಿಗೂ ಮಾಡುವುದಿಲ್ಲ ಎಂದಿದ್ದಾರೆ.