ಕುವೈತ್ ಸಿಟಿ:ವಿದೇಶಾಂಗ ಸಚಿವ ಎಸ್.ಜೈಶಂಕರ್ ಕುವೈತ್ಗೆ ಭೇಟಿ ನೀಡಿದ್ದಾರೆ. ಕುವೈತ್‌ನ ತಮ್ಮ ಸಹವರ್ತಿ ಶೇಖ್ ಅಹ್ಮದ್ ನಾಸರ್ ಅಲ್-ಮೊಹಮ್ಮದ್ ಅಲ್-ಸಬಾ ಅವರೊಂದಿಗೆ ಮಹತ್ವದ ಹಾಗೂ ಫಲಪ್ರದ ಮಾತುಕತೆ ನಡೆಸಿದರು.
ಈ ಮಹತ್ವದ ಭೇಟಿ ವೇಳೆ ಭಾರತದ ವಿದೇಶಾಂಗ ಸಚಿವರು, ಆರೋಗ್ಯ, ಆಹಾರ, ಶಿಕ್ಷಣ, ಇಂಧನ, ಡಿಜಿಟಲ್ ಮತ್ತು ವ್ಯವಹಾರ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಕುವೈತ್‌ನೊಂದಿಗೆ ನಮ್ಮ ಸಾಂಪ್ರದಾಯಿಕ ಸ್ನೇಹ ಮುಂದುರಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು. ಈ ಮಾತುಕತೆ ವೇಳೆ, ಆರೋಗ್ಯ, ಆಹಾರ, ಶಿಕ್ಷಣ, ಶಕ್ತಿ, ಡಿಜಿಟಲ್ ಮತ್ತು ವ್ಯವಹಾರ ಸಹಕಾರ ಕುರಿತಂತೆ ಚರ್ಚಿಸಲಾಯಿತು ಎಂದು ಜೈ ಶಂಕರ್ ತಮ್ಮ ಟ್ವಿಟರ್ ಖಾತೆ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಕುವೈತ್‌ನಲ್ಲಿ ಭಾರತೀಯ ಕಾರ್ಮಿಕರಿಗೆ ಹೆಚ್ಚಿನ ಕಾನೂನು ರಕ್ಷಣೆ ನೀಡುವ ತಿಳಿವಳಿಕೆ ಒಪ್ಪಂದಕ್ಕೆ ಎರಡೂ ಕಡೆಯವರು ಸಹಿ ಹಾಕಿದರು. ನಮ್ಮ ಕಾರ್ಮಿಕರಿಗೆ ಹೆಚ್ಚಿನ ಕಾನೂನು ರಕ್ಷಣೆ ನೀಡುವ ಒಪ್ಪಂದಕ್ಕೆ ಇದು ಸಾಕ್ಷಿಯಾಗಿದೆ. ನಮ್ಮ ಸಂಬಂಧಗಳ 60 ನೇ ವಾರ್ಷಿಕೋತ್ಸವದ ಆಚರಣೆಯನ್ನು ಪ್ರಾರಂಭಿಸಿದೆ ಎಂದು ಜೈಶಂಕರ್ ಹೇಳಿದ್ದಾರೆ.
ಕುವೈತ್‌ನಲ್ಲಿ 10 ಲಕ್ಷಕ್ಕೂ ಹೆಚ್ಚು ಭಾರತೀಯರು ವಾಸಿಸುತ್ತಿದ್ದಾರೆ. ಭಾರತವು ಕುವೈತ್‌ನ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರಗಳಲ್ಲಿ ಒಂದಾಗಿದೆ ಮತ್ತು ಕುವೈತ್ ಭಾರತಕ್ಕೆ ಪ್ರಮುಖ ತೈಲ ಪೂರೈಕೆದಾರ ರಾಷ್ಟ್ರವೂ ಹೌದು.