ಕರ್ನಾಟಕ

karnataka

ETV Bharat / bharat

ಆಫ್ಘನ್​ ಬಿಕ್ಕಟ್ಟು: ಅರ್ಮೇನಿಯಾ, ಉಜ್ಬೇಕಿಸ್ತಾನ, ಇರಾನ್​ ಸಚಿವರ ಜತೆ ಜೈಶಂಕರ್ ಚರ್ಚೆ - Jaishankar meets his counterparts from Iran, Armenia and Uzbekistan at SCO

ಆಫ್ಘನ್​ ಬಿಕ್ಕಟ್ಟು ಕುರಿತಂತೆ ಅರ್ಮೇನಿಯಾ ಮತ್ತು ಉಜ್ಬೇಕಿಸ್ತಾನದ ವಿದೇಶಾಂಗ ಸಚಿವರ ಜತೆ ಸಚಿವ ಎಸ್​.ಜೈಶಂಕರ್ ಮಾತುಕತೆ ನಡೆಸಿದ್ದಾರೆ.

ಎಸ್​.ಜೈಶಂಕರ್
ಎಸ್​.ಜೈಶಂಕರ್

By

Published : Sep 17, 2021, 8:33 AM IST

ದುಶಾಂಬೆ(ತಜಕಿಸ್ತಾನ): ವಿದೇಶಾಂಗ ಸಚಿವ ಎಸ್.ಜೈಶಂಕರ್ ಶುಕ್ರವಾರ ಅರ್ಮೇನಿಯಾ ಮತ್ತು ಉಜ್ಬೇಕಿಸ್ತಾನದ ವಿದೇಶಾಂಗ ಸಚಿವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ, ಆಫ್ಘನ್​ನಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ದ್ವಿಪಕ್ಷೀಯ ಸಂಬಂಧದ ಕುರಿತೂ ಮಾತುಕತೆ ನಡೆಸಿದ್ದಾರೆ.

ಆಫ್ಘನ್​ ಪ್ರಸ್ತುತ ಬೆಳವಣಿಗೆ ಕುರಿತಂತೆ ಚರ್ಚೆ

ಆಫ್ಘನ್​ಅನ್ನು ತಾಲಿಬಾನ್​ ವಶಕ್ಕೆ ಪಡೆದ ಬಳಿಕ ಅಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಪ್ರಮುಖ ಸಭೆಯಲ್ಲಿ ಚರ್ಚಿಸಲು ಜೈ ಶಂಕರ್​​ ದುಶಾಂಬೆಗೆ ತೆರಳಿದ್ದರು.

ದ್ವಿಪಕ್ಷೀಯ ಸಂಬಂಧ ಬಲಪಡಿಸುವ ನಿಟ್ಟಿನಲ್ಲಿ ಮಾತುಕತೆ

ಈ ವೇಳೆ, ಇರಾನಿನ ವಿದೇಶಾಂಗ ಸಚಿವ ಹೊಸೇನ್ ಅಮೀರ್ ಅಬ್ದೊಲ್ಲಾಹಿಯಾನ್ ಅವರನ್ನು ಭೇಟಿಯಾಗಲು ಸಂತೋಷವಾಗಿದೆ ಎಂದು ಸಚಿವ ಜೈಶಂಕರ್ ಟ್ವೀಟ್ ಮಾಡಿದ್ದಾರೆ. ನಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಮತ್ತು ಪ್ರಾದೇಶಿಕ ಸವಾಲುಗಳ ಮೇಲೆ ಒಟ್ಟಾಗಿ ಕೆಲಸ ಮಾಡಲು ಚರ್ಚಿಸಲಾಗಿದೆ ಎಂದು ಅವರು ಹೇಳಿದರು. ಅರ್ಮೇನಿಯನ್ ವಿದೇಶಾಂಗ ಸಚಿವ ಅರರತ್ ಮಿರ್ಜೋಯಾನ್ ಜತೆ ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಹಕಾರ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಹೇಳಿದ್ದಾರೆ.

ಭಯೋತ್ಪಾದನೆ ವಿರುದ್ಧ ಹೋರಾಟ ಮುಂದುವರಿಯಲಿದೆ

ಉಜ್ಬೇಕಿಸ್ತಾನದ ವಿದೇಶಾಂಗ ಸಚಿವ ಅಬ್ದುಲಝೈಜ್​ ಕಮಿಲೋವ್ ಅವರನ್ನು ಭೇಟಿಯಾಗಲು ಸಂತೋಷವಾಗಿದೆ. ಅಫ್ಘಾನಿಸ್ತಾನದ ಪ್ರಸ್ತುತ ಬೆಳವಣಿಗೆಗಳ ಕುರಿತಂತೆ ನಾವು ಚರ್ಚಿಸಿದ್ದೇವೆ. ಭಯೋತ್ಪಾದನೆ ಮತ್ತು ಮೂಲಭೂತವಾದದ ವಿರುದ್ಧ ಹೋರಾಡುವ ದೇಶಗಳಾಗಿ, ನಮ್ಮ ನಿಕಟ ಸಹಕಾರವು ಪರಸ್ಪರ ಹಿತಾಸಕ್ತಿಯನ್ನು ಹೊಂದಿದೆ ಎಂದು ಉಜ್ಬೇಕಿಸ್ತಾನದ ವಿದೇಶಾಂಗ ಸಚಿವರನ್ನು ಭೇಟಿಯಾದ ನಂತರ ಜೈ ಶಂಕರ್​ ಟ್ವೀಟ್ ಮಾಡಿದ್ದಾರೆ.

ಎಸ್​ಸಿಒ ಶೃಂಗಸಭೆಯಲ್ಲಿ ನಮೋ ಭಾಗಿ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ನಡೆಯುವ ವಾರ್ಷಿಕ ಎಸ್‌ಸಿಒ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದರಲ್ಲಿ ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳು ಹಾಗೂ ಒಟ್ಟಾರೆ ಪ್ರಾದೇಶಿಕ ಭದ್ರತಾ ಸನ್ನಿವೇಶದ ಕುರಿತು ಚರ್ಚಿಸುವ ನಿರೀಕ್ಷೆಯಿದೆ. ಎಸ್‌ಸಿಒ ಮತ್ತು ಸಾಮೂಹಿಕ ಭದ್ರತಾ ಒಪ್ಪಂದ ಸಂಸ್ಥೆಯ ಮುಖ್ಯಸ್ಥರೊಂದಿಗೆ ಜೈಶಂಕರ್ ಅಫ್ಘಾನಿಸ್ತಾನದ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ನ್ಯಾಟೋಗೆ ಪ್ರತಿಸ್ಪರ್ಧಿ ಎಸ್​ಸಿಒ

ನ್ಯಾಟೋಗೆ ಪ್ರತಿಸ್ಪರ್ಧಿಯಾಗಿ ಕಾಣುವ SCO, ಎಂಟು ಸದಸ್ಯರ ಆರ್ಥಿಕ ಮತ್ತು ಭದ್ರತಾ ಘಟಕವಾಗಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿನ ಅತಿ ದೊಡ್ಡ ಸಂಸ್ಥೆಗಳಲ್ಲಿ ಒಂದಾಗಿದೆ. 2017 ರಲ್ಲಿ ಭಾರತ ಮತ್ತು ಪಾಕಿಸ್ತಾನ ಅದರ ಖಾಯಂ ಸದಸ್ಯ ರಾಷ್ಟ್ರಗಳಾದವು.

2001 ರಲ್ಲಿ ಶಾಂಘೈನಲ್ಲಿ ನಡೆದ ಶೃಂಗಸಭೆಯಲ್ಲಿ ರಷ್ಯಾ, ಚೀನಾ, ಕಿರ್ಗಿಸ್ ಗಣರಾಜ್ಯ, ಕಜಕಿಸ್ತಾನ್, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಅಧ್ಯಕ್ಷರು ಎಸ್​ಸಿಒವನ್ನು ಸ್ಥಾಪಿಸಿದರು.

ABOUT THE AUTHOR

...view details