ನವದೆಹಲಿ: ಮೂರು ದಿನಗಳ ಮೆಕ್ಸಿಕೋ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಜೈಶಂಕರ್ ಅವರು ಸೋಮವಾರ ಮೆಕ್ಸಿಕೋದ ಬಿಯಾಟ್ರಿಝ್ ಜಿ ಮುಲ್ಲರ್, ವಿದೇಶಾಂಗ ಸಚಿವ ಮಾರ್ಸೆಲೊ ಇಬ್ರಾಡ್ ಸಿ ಮತ್ತು ರಕ್ಷಣಾ ಸಚಿವ ಲೂಯಿಸ್ ಸಿ ಸಂಡೋವಲ್ರನ್ನು ಭೇಟಿಯಾಗಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಮೆಕ್ಸಿಕೋ ಸ್ವಾತಂತ್ರ್ಯ ಪಡೆದು ಇನ್ನೂರು ವರ್ಷ ಅದ ಹಿನ್ನೆಲೆ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಬಿಯಾಟ್ರಿಝ್ ಜಿ ಮುಲ್ಲರ್ ಸೇರಿದಂತೆ ಉಳಿದ ಪ್ರಮುಖ ಸಚಿವರನ್ನು ಭೇಟಿಯಾಗಿರುವುದು ಸಂತೋಷವಾಗಿದೆ ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಮೆಕ್ಸಿಕೋ ಅಧ್ಯಕ್ಷ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಅನ್ನು ಸಹ ಭೇಟಿಯಾಗಿದ್ದಾರೆ. ಎರಡು ಖಂಡಗಳ, ಎರಡು ನಾಗರಿಕತೆಗಳ ವಿಷಯಗಳನ್ನು ಹಂಚಿಕೊಳ್ಳಲು ಈ ಭೇಟಿ ನೆರವಾಗಿದೆ. ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಅವರ ಭೇಟಿ ಸಂತೋಷ ತಂದಿದೆ ಎಂದು ಮತ್ತೊಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.