ಛಾಪ್ರಾ(ಬಿಹಾರ್): ಜಿಲ್ಲೆಯ ಪಾಣಾಪುರದಲ್ಲಿ ಬಾಬಾವೊಬ್ಬರು ಸುದ್ದಿಯಲ್ಲಿದ್ದಾರೆ. ಬಾಬಾಗೆ ಅಲೌಕಿಕ ಶಕ್ತಿಗಳಿವೆ ಎಂದು ಜನರು ಹೇಳಿಕೊಳ್ಳುತ್ತಾರೆ. ಈ ಬಾಬಾ 12 ವರ್ಷಗಳಿಂದ ಆಹಾರವನ್ನು ತೆಗೆದುಕೊಂಡಿಲ್ಲವಂತೆ. 12 ವರ್ಷಗಳ ಕಾಲ ಹೂವುಗಳನ್ನು ತಿಂದು ಬದುಕುತ್ತಿದ್ದೇನೆ ಮತ್ತು ಜನರ ಸಮಸ್ಯೆಗಳನ್ನು ನಿವಾರಿಸುತ್ತಿದ್ದೇನೆ ಎಂದು ಬಾಬಾ ಹೇಳುತ್ತಿದ್ದಾರೆ.
ಕೆಂಪು ಮೆಣಸಿನಕಾಯಿ ಹೋಮ:ಬಾಬಾರ ಒಂದು ದೊಡ್ಡ ವೈಶಿಷ್ಟ್ಯ ಎಂದರೆ ಅವರು ಶ್ರಾವಣದಲ್ಲಿ 3 ದಿನಗಳ ಕಾಲ ಒಂದು ಕ್ವಿಂಟಾಲ್ ಕೆಂಪು ಮೆಣಸಿನಕಾಯಿ ಹೋಮವನ್ನು ಮಾಡುತ್ತಾರೆ. ಇಲ್ಲಿನ ಜನ ಅವರಿಗೆ ಸಂತ ಎಂಬ ಬಿರುದು ನೀಡಿದ್ದಾರೆ. ಬಾಬಾ ಅವರು ಎಲ್ಲ ಸಮಸ್ಯೆಗಳನ್ನು ಪರಿಹರಿಸುತ್ತಾರೆ ಎಂದು ಜನ ಹೇಳುತ್ತಾರೆ. ಈ ಬಾಬಾ ಹೆಸರು ಸಂತ ಜೈರಾಮ್ ದಾಸ್ ಅಲಿಯಾಸ್ ಬೆಲ್ಪಾಟಿಯಾ ಬಾಬಾ. ಅವರ ವಯಸ್ಸು ಸುಮಾರು 45 ವರ್ಷ.
ವಿಶ್ವವನ್ನು ಉಳಿಸಲು ಮೆಣಸಿನಕಾಯಿ ಹೋಮ: ಸಂತ ಜೈರಾಮ್ ದಾಸ್ ಪಾಣಾಪುರದ ರಾಕೌಲಿ ದಕ್ಷಿಣೇಶ್ವರಿ ಕಾಳಿ ದೇವಸ್ಥಾನದಲ್ಲಿ ವಾಸಿಸುತ್ತಿದ್ದಾರೆ. ಭೋಲೆನಾಥ್ ಮತ್ತು ಮಾತೆ ಕಾಳಿಯನ್ನು ಈ ಬಾಬಾ ಪೂಜಿಸುತ್ತಾರೆ. ವಾತಾವರಣ ಶುದ್ಧೀಕರಿಸಲು ಮತ್ತು ವಿಶ್ವವವನ್ನು ದುಷ್ಟ ಶಕ್ತಿಗಳಿಂದ ರಕ್ಷಿಸಲು ಅವರು ಕಳೆದ 12 ವರ್ಷಗಳಿಂದ ಈ ಮೆಣಸಿನಕಾಯಿ ಹೋಮವನ್ನು ಬಾಬಾ ನೆರೆವೇರಿಸುತ್ತಾ ಬಂದಿದ್ದಾರಂತೆ.
ನಾನು ಅನ್ನವನ್ನು ತಿನ್ನುವುದಿಲ್ಲ. ಹೂವಿನ ಎಲೆಗಳು ನನ್ನ ಆಹಾರ. ನಾನು ಎಲೆಗಳು ಮತ್ತು ಹೂವುಗಳನ್ನು ತಿನ್ನುತ್ತೇನೆ. ನಾನು ಮನೆಯಲ್ಲಿ ಯಾವುದೇ ರೀತಿಯ ತೊಂದರೆ, ಭೂತ, ಯಾವುದೇ ಅಡೆತಡೆಗಳು ಇದ್ದರೂ ಈ ಹೋಮದಿಂದ ನಿವಾರಿಸುತ್ತೇನೆ. ಈ ಹೋಮ ಮಾಡುವುದರಿಂದ ಜನರಿಗೆ ಕಲ್ಯಾಣವಾಗುತ್ತದೆ. ಜನರ ಸಮಸ್ಯೆಗಳು ದೂರವಾಗುತ್ತವೆ ಎಂದು ಬಾಬಾ ಮಾತಾಗಿದೆ.