ಮುಂಬೈ (ಮಹಾರಾಷ್ಟ್ರ): ತಮ್ಮ ಮುಂಬರುವ ಜೈ ಭೀಮ್ ಚಿತ್ರ ಮೌಲ್ಯವನ್ನು ಹೊಂದಿರುವ ಚಲನಚಿತ್ರವಾಗಿದೆ ಎಂದು ನಟ ಸೂರ್ಯ ಹೇಳಿದ್ದಾರೆ.
ಇದು ನ್ಯಾಯಕ್ಕಾಗಿ, ಸಮುದಾಯದ ಅನ್ವೇಷಣೆಯ ಕಟುವಾದ ಚಿತ್ರಣದ ಮೂಲಕ ಹಲವಾರು ಪ್ರಮುಖ ಪ್ರಶ್ನೆಗಳನ್ನು ಎತ್ತುವ ಗುರಿಯನ್ನು ಹೊಂದಿದೆ. ಈ ಚಿತ್ರವು ತಮಿಳುನಾಡಿನಲ್ಲಿ 1990ರ ದಶಕದಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿದೆ ಮತ್ತು ಇರುಲರ್ ಬುಡಕಟ್ಟು ಸಮುದಾಯದ ಸೆಂಗೇಣಿ ಮತ್ತು ರಾಜಕಣ್ಣು ದಂಪತಿಗಳ ಕಥೆಯನ್ನು ಅನುಸರಿಸುತ್ತದೆ ಎಂದು ವಿವರಿಸಿದ್ದಾರೆ.
ರಾಜಕಣ್ಣು ಸುಳ್ಳು ಆರೋಪದ ಮೇಲೆ ಬಂಧಿಸಲ್ಪಡುತ್ತಾನೆ. ನಂತರ ಪೊಲೀಸ್ ಕಸ್ಟಡಿಯಿಂದ ಆತ ನಾಪತ್ತೆಯಾದಾಗ, ಅವನ ಹೆಂಡತಿ ತನ್ನ ಗಂಡನನ್ನು ಹುಡುಕಲು ವಕೀಲ ಚಂದ್ರುವಿನ(ಸೂರ್ಯ)ಸಹಾಯವನ್ನು ತೆಗೆದುಕೊಳ್ಳುತ್ತಾಳೆ.
ವರ್ಚುವಲ್ ಸಭೆಯಲ್ಲಿ ಮಾತನಾಡಿರುವ ಸೂರ್ಯ, ಈಗ ಜೈ ಭೀಮ್‌ನಂತಹ ಚಲನಚಿತ್ರಗಳತ್ತ ಜನರು ಒಲವು ತೋರುತ್ತಿದ್ದಾರೆ ಎಂದು ಹೇಳಿದ್ದಾರೆ. ಹಾಗೆ ಇದು ದೊಡ್ಡ ಸಾಮಾಜಿಕ ಸಂಭಾಷಣೆಯನ್ನು ಹುಟ್ಟು ಹಾಕುತ್ತದೆ ಎಂದು ವಿಶ್ವಾಸ ವ್ಯಕ್ತಡಿಸಿದ್ದಾರೆ.