ಕಾಡಿನ ಕಾನೂನು ಎಂದರೆ ಬಲಿಷ್ಠರು ಬದುಕುಳಿಯುವುದೇ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಈ ಒಂದು ಮಾತಿಗೊಂದು ನಿದರ್ಶನ. ನೀರಿನಲ್ಲಿ ಈಜುತ್ತಿದ್ದ ಮೊಸಳೆಯ ಮೇಲೆ ಹೊಂಚು ಹಾಕಿ ದಾಳಿ ಮಾಡಿದ ಜಾಗ್ವಾರ್ ಅದನ್ನು ಹೊತ್ತೊಯ್ದು ಕೊಂದು ತಿಂದಿದೆ.
ನೀರಿನಲ್ಲಿ ಈಜುತ್ತಿದ್ದ ಮೊಸಳೆ ಮೇಲೆ ಜಾಗ್ವಾರ್ ದಾಳಿ: ಮೈನವಿರೇಳಿಸುವ ವಿಡಿಯೋ
ನೀರಿನಲ್ಲಿದ್ದ ಮೊಸಳೆಯ ಮೇಲೆ ಹೊಂಚು ಹಾಕಿ ದಾಳಿ ಮಾಡಿದ ಜಾಗ್ವಾರ್ ಅದನ್ನು ಕೊಂದು ಹಾಕಿದೆ.
ಜಾಗ್ವಾರ್, ಮೊಸಳೆಯ ಮೇಲೆ ದಾಳಿ ಮಾಡಲು ಮುಂದಾಗುವಾಗ ಅನುಸರಿಸುವ ಚಾಕಚಕ್ಯತೆ, ಎಚ್ಚರಿಕೆಯ ನಡೆಯನ್ನು ನೀವು ಕಾಣಬಹುದು. ದೊಡ್ಡ ಬೆಕ್ಕು ಮೊದಲು ನದಿಯ ಬಳಿಯಿರುವ ಮರದ ಕೊಂಬೆಗಳು ಮತ್ತು ಪೊದೆಗಳ ನಡುವೆ ಅಡಗಿಕೊಂಡಿದ್ದು, ಮೊಸಳೆಯ ಮೇಲೆ ಸಂಪೂರ್ಣ ಗಮನ ಕೇಂದ್ರೀಕರಿಸುತ್ತದೆ. ನಂತರ ನೀರಿನಲ್ಲಿ ತೇಲುತ್ತಿದ್ದ ಮೊಸಳೆಯ ಮೇಲೆ ಏಕಾಏಕಿ ಹಾರಿ ಕತ್ತಿಗೆ ಕಚ್ಚಿ ನೀರಿನಿಂದ ಹೊತ್ತುಕೊಂಡು ಕಾಡಿನೆಡೆಗೆ ಸಾಗುತ್ತದೆ. ಈ ಸಂದರ್ಭದಲ್ಲಿ ಅದರ ಶಕ್ತಿ ಎಂಥವರನ್ನೂ ಅಚ್ಚರಿ ಮೂಡಿಸುವಂತಿದೆ.
ಇದನ್ನೂ ಓದಿ: ಪ್ರೀತಿಸಿದ ರೌಡಿಗೋಸ್ಕರ ಕಾಲುವೆ ಹಾರಿ ಹೋದ ಬಾಲಕಿ: ಹುಡುಕಾಟಕ್ಕಿಳಿದ ಪೊಲೀಸರಿಗೆ ಸುಸ್ತು