ಕರ್ನಾಟಕ

karnataka

ETV Bharat / bharat

ಪುರಿ ದೇವಸ್ಥಾನದ ಅಡುಗೆ ಮನೆಯಲ್ಲಿನ 40 ಮಣ್ಣಿನ ಒಲೆಗಳು ಧ್ವಂಸ: ತನಿಖೆಗೆ ಆದೇಶ

ಪುರಿ ಜಗನ್ನಾಥ ದೇವಸ್ಥಾನದ ಅಡುಗೆ ಮನೆಯಲ್ಲಿನ 40 ಮಣ್ಣಿನ ಒಲೆಗಳನ್ನು ಯಾರೋ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಈ ಘಟನೆಯ ತನಿಖೆಗಾಗಿ ದೇವಾಲಯದ ಭದ್ರತಾ ನಿರ್ವಾಹಕರು ಮತ್ತು ನೀತಿ ನಿರ್ವಾಹಕರನ್ನು ಒಳಗೊಂಡ ತಂಡವನ್ನು ರಚಿಸಲಾಗಿದೆ.

Miscreants vandalize 40 clay stoves at Puri temple
ಪುರಿ ದೇವಸ್ಥಾನದ ಅಡುಗೆ ಮನೆಯಲ್ಲಿನ 40 ಮಣ್ಣಿನ ಒಲೆಗಳು ಧ್ವಂಸ

By

Published : Apr 4, 2022, 5:43 PM IST

ಪುರಿ: ಪುರಿ ಜಗನ್ನಾಥ ದೇವಸ್ಥಾನದ ಅಡುಗೆ ಕೋಣೆಯಲ್ಲಿದ್ದ ಸುಮಾರು 40 ಮಣ್ಣಿನ ಒಲೆಗಳು ಧ್ವಂಸಗೊಂಡಿವೆ ಎಂದು ಮೂಲಗಳು ತಿಳಿಸಿವೆ. ಭಾನುವಾರ ಬೆಳಗ್ಗೆ ‘ರೋಷಾಘರಾ’ ಅಥವಾ ದೇವಸ್ಥಾನದ ಅಡುಗೆ ಕೋಣೆಯ ಬಾಗಿಲು ತೆರೆದಾಗ ಈ ವಿಷಯ ಬೆಳಕಿಗೆ ಬಂದಿದೆ. ಶನಿವಾರ ರಾತ್ರಿ ಎಲ್ಲಾ ಕೆಲಸ ಮುಗಿದ ಬಳಿಕ ದುಷ್ಕರ್ಮಿಗಳು ಒಲೆಗಳನ್ನು ಧ್ವಂಸಗೊಳಿಸಿರುವ ಶಂಕೆ ವ್ಯಕ್ತವಾಗಿದೆ.

ದೇಶದಲ್ಲೇ ಅತಿ ದೊಡ್ಡದಾಗಿರುವ ಅಡುಗೆ ಮನೆಯನ್ನು ಪುರಿ ದೇವಸ್ಥಾನ ಹೊಂದಿದ್ದು, ಅಲ್ಲಿ ಒಟ್ಟು 240 ಮಣ್ಣಿನ ಒಲೆಗಳಿವೆ. ಇದರಲ್ಲಿ 43 ಒಲೆಗಳನ್ನು ಧ್ವಂಸಗೊಳಿಸಲಾಗಿದೆ. ದೇವಾಲಯದ ದೇವರುಗಳಿಗೆ ಮತ್ತು ಭಕ್ತರಿಗೆ ‘ಮಹಾಪ್ರಸಾದ’ ತಯಾರಿಸಲು ಈ ಒಲೆಗಳನ್ನು ಬಳಸಲಾಗುತ್ತದೆ. ವ್ಯಾಪಾರ ವೈಷಮ್ಯವೇ ಈ ಘಟನೆಗೆ ಕಾರಣ ಎಂದು ಹೇಳಲಾಗಿದೆ.

ಇದನ್ನೂ ಓದಿ:ಗುರುದಾಸ್‌ಪುರ : ವಿಕೋಪಕ್ಕೆ ತಿರುಗಿದ ಭೂ ವಿವಾದ : ಗುಂಡಿಕ್ಕಿ ನಾಲ್ವರ ಹತ್ಯೆ

ಘಟನೆಯ ತನಿಖೆಗಾಗಿ ದೇವಾಲಯದ ಭದ್ರತಾ ನಿರ್ವಾಹಕರು ಮತ್ತು ನೀತಿ ನಿರ್ವಾಹಕರನ್ನು ಒಳಗೊಂಡ ತಂಡವನ್ನು ರಚಿಸಲಾಗಿದೆ. ಈ ಸಂಬಂಧ ಕೆಲವು ಸೇವಾಯತ್‌ಗಳು ಮತ್ತು ಜೆಟಿಪಿ ಸದಸ್ಯರನ್ನು ವಿಚಾರಣೆ ಮಾಡಲಾಗಿದೆ. ಈ ನಡುವೆ ತನಿಖಾ ತಂಡದ ಸದಸ್ಯರು ತನಿಖಾ ವರದಿಯನ್ನು ಸಲ್ಲಿಸಿದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪುರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಸಮರ್ಥ್ ಬರ್ಮಾ ಹೇಳಿದ್ದಾರೆ.

ರೋಷಾಘರಾದಲ್ಲಿ (ಅಡುಗೆಮನೆ) ಸಿಸಿಟಿವಿ ಕ್ಯಾಮೆರಾಗಳಿಗೆ ಯಾವುದೇ ಅವಕಾಶವಿಲ್ಲ. ಧ್ವಂಸಗೊಂಡ ಒಲೆಗಳಿಂದ ಸುಮಾರು 15,000 ಭಕ್ತರಿಗೆ ಪ್ರಸಾದ ವಿತರಿಸಬಹುದಿತ್ತು. ಪುರಿ ಜಗನ್ನಾಥ ದೇವಾಲಯದ ಅಡುಗೆಮನೆಯಲ್ಲಿ ಅರ್ಚಕರು ಪ್ರತಿದಿನ 1 ಲಕ್ಷ ಭಕ್ತರಿಗೆ ಮಹಾಪ್ರಸಾದವನ್ನು ತಯಾರಿಸುತ್ತಿದ್ದರು.

ABOUT THE AUTHOR

...view details