ಕರ್ನಾಟಕ

karnataka

ETV Bharat / bharat

ದೆಹಲಿಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷನಿಂದ ರಾಕೇಶ್ ಸಿನ್ಹಾ ಆಯ್ಕೆ ಕುರಿತು ಆಕ್ಷೇಪಾರ್ಹ ಟ್ವೀಟ್

ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಅಂಜುಮನ್ ಕೋರ್ಟ್ ವಿಶ್ವವಿದ್ಯಾಲಯದ ಅತ್ಯುನ್ನತ ಅಧಿಕಾರವಾಗಿದೆ. ಇದು ಒಟ್ಟು 59 ಸದಸ್ಯರನ್ನು ಒಳಗೊಂಡಿದ್ದು, ಇದರಲ್ಲಿ ಉಪಕುಲಪತಿ ಮತ್ತು ಇತರ ಪ್ರಮುಖ ಪದಾಧಿಕಾರಿಗಳ ಹೊರತಾಗಿ, ಲೋಕಸಭೆಯ ಇಬ್ಬರು ಸದಸ್ಯರು ಮತ್ತು ರಾಜ್ಯಸಭೆಯ ಒಬ್ಬರು ಸದಸ್ಯರಿರುತ್ತಾರೆ. ಅಂಜುಮನ್ ನ್ಯಾಯಾಲಯದ ಸದಸ್ಯರ ಅಧಿಕಾರದ ಅವಧಿ 3 ವರ್ಷಗಳಾಗಿವೆ..

jafrul-islam-khan-tweetof-rakesh-sinha-as-court-member-of-jamia-millia-anjuman
ದೆಹಲಿಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷನಿಂದ ರಾಕೇಶ್ ಸಿನ್ಹಾ ಆಯ್ಕೆ ಕುರಿತು ಆಕ್ಷೇಪಾರ್ಹ ಟ್ವೀಟ್

By

Published : Feb 21, 2022, 4:24 PM IST

ನವದೆಹಲಿ :ಪ್ರೊಫೆಸರ್ ರಾಕೇಶ್ ಸಿನ್ಹಾ ಅವರನ್ನು ಜಾಮಿಯಾ ಮಿಲಿಯಾ ಇಸ್ಲಾಮಿಯಾ ಕೋರ್ಟ್‌ಗೆ ನೇಮಕ ಮಾಡಿರುವುದನ್ನು ದೆಹಲಿ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಜಫರುಲ್ ಇಸ್ಲಾಂ ಖಾನ್ ಅವರು ಆಕ್ಷೇಪಾರ್ಹ ಪದಗಳನ್ನು ಬಳಸಿ ವಿರೋಧಿಸಿದ್ದಾರೆ.

ಪ್ರೊಫೆಸರ್ ರಾಕೇಶ್ ಸಿನ್ಹಾ ಅವರ ನೇಮಕಕ್ಕೆ ಸಂಬಂಧಿಸಿದಂತೆ ಅವರು ಮುಸ್ಲಿಂ ಸಮುದಾಯದ ಜನರ ಸಾವಿನ ಬಗ್ಗೆ ಬರೆಯಲಾಗುವ ಸಾಲನ್ನು ಟ್ವೀಟ್‌ನಲ್ಲಿ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪ್ರೊಫೆಸರ್ ರಾಕೇಶ್ ಸಿನ್ಹಾ ಅವರು ರಾಜ್ಯಸಭಾ ಸಂಸದ ಮತ್ತು ಸಂಘದ ಚಿಂತಕರಾಗಿ ಗುರುತಿಸಿಕೊಂಡವರಾಗಿದ್ದು,ಇವರನ್ನು ಜಾಮಿಯಾ ಮಿಲಿಯಾ ಇಸ್ಲಾಮಿಯಾ ನ್ಯಾಯಾಲಯದ ಸದಸ್ಯರಾಗಿ ನೇಮಕ ಮಾಡಿರುವುದಕ್ಕೆ ಜಫರುಲ್ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರೊಫೆಸರ್ ರಾಕೇಶ್ ಸಿನ್ಹಾ ನೇಮಕದ ಕುರಿತು ಟ್ವೀಟ್ ಮಾಡಿರುವ ಅವರು, ಸಂಘದ ಚಿಂತನೆಯ ವ್ಯಕ್ತಿಯನ್ನು ಜಾಮಿಯಾ ಮಿಲಿಯಾ ಅಂಜುಮನ್‌ನ ಸದಸ್ಯನನ್ನಾಗಿ ಮಾಡಲಾಗಿದೆ.

ಈ ಬಗ್ಗೆ 'ಇನ್ನಾ ಲಿಲ್ಲಾಹಿ ವ ಇನ್ನ ಇಲಾಹಿ ರಾಜಿಯೂನ್, ಅಂದರೆ ನಾವು ಅಲ್ಲಾಹುನಿಗೆ ಸೇರಿದ್ದೇವೆ ಮತ್ತು ನಾವು ಅಲ್ಲಾಹುನ ಬಳಿಗೆ ಹೋಗಬೇಕು' ಎಂದು ಬರೆದಿದ್ದಾರೆ. ಈ ವಾಕ್ಯವನ್ನು ಯಾರಾದರೂ ಸತ್ತಾಗ ಅಥವಾ ಮುಖ್ಯವಾದದ್ದನ್ನು ಕಳೆದುಕೊಂಡಾಗ ಬರೆಯುವುದಾಗಿದೆ ಎಂದು ಹೇಳಲಾಗಿದೆ.

ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಅಂಜುಮನ್ ಕೋರ್ಟ್ ವಿಶ್ವವಿದ್ಯಾಲಯದ ಅತ್ಯುನ್ನತ ಅಧಿಕಾರವಾಗಿದೆ. ಇದು ಒಟ್ಟು 59 ಸದಸ್ಯರನ್ನು ಒಳಗೊಂಡಿದ್ದು, ಇದರಲ್ಲಿ ಉಪಕುಲಪತಿ ಮತ್ತು ಇತರ ಪ್ರಮುಖ ಪದಾಧಿಕಾರಿಗಳ ಹೊರತಾಗಿ, ಲೋಕಸಭೆಯ ಇಬ್ಬರು ಸದಸ್ಯರು ಮತ್ತು ರಾಜ್ಯಸಭೆಯ ಒಬ್ಬರು ಸದಸ್ಯರಿರುತ್ತಾರೆ. ಅಂಜುಮನ್ ನ್ಯಾಯಾಲಯದ ಸದಸ್ಯರ ಅಧಿಕಾರದ ಅವಧಿ 3 ವರ್ಷಗಳಾಗಿವೆ.

ಓದಿ :ಹರ್ಷನ ಅಂತಿಮಯಾತ್ರೆ ವೇಳೆ ಕಲ್ಲು ತೂರಾಟ.. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರಿಂದ ಟಿಯರ್ ಗ್ಯಾಸ್ ಪ್ರಯೋಗ

ABOUT THE AUTHOR

...view details