ಕರ್ನಾಟಕ

karnataka

ETV Bharat / bharat

ಸಿಐಎಸ್​ಎಫ್​​ ತೆರಳುತ್ತಿದ್ದ ವಾಹನದ ಮೇಲೆ ಉಗ್ರರ ದಾಳಿ : ಓರ್ವ ಅಧಿಕಾರಿ ಹುತಾತ್ಮ, ಇಬ್ಬರಿಗೆ ಗಾಯ - ಭಯೋತ್ಪಾದಕ ದಾಳಿ ಸಿಐಎಸ್ಎಫ್​ ಅಧಿಕಾರಿ ಸಾವು

ಸಿಐಎಸ್‌ಎಫ್ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್‌ನ ಮೇಲೆ ಶುಕ್ರವಾರ ಜಮ್ಮುವಿನ ಚಡ್ಡಾ ಕ್ಯಾಂಪ್ ಬಳಿ ಭಯೋತ್ಪಾದಕರು ದಾಳಿ ನಡೆಸಿದ್ದು, ಸಿಐಎಸ್​ಎಫ್​ನ ಓರ್ವ ಎಎಸ್​ಐ ಹುತಾತ್ಮರಾಗಿದ್ದಾರೆ ಎಂದು ತಿಳಿದು ಬಂದಿದೆ..

J-K: Terrorists attack bus carrying CISF personnel ; 1 died, 2 injured
ಸಿಐಎಸ್​ಎಫ್​​ ತೆರಳುತ್ತಿದ್ದ ವಾಹನದ ಮೇಲೆ ಉಗ್ರರ ದಾಳಿ: ಓರ್ವ ಅಧಿಕಾರಿ ಹುತಾತ್ಮ, ಇಬ್ಬರಿಗೆ ಗಾಯ

By

Published : Apr 22, 2022, 9:46 AM IST

ಜಮ್ಮು, ಜಮ್ಮು ಕಾಶ್ಮೀರ :ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್‌ನ ಮೇಲೆ ಶುಕ್ರವಾರ ಜಮ್ಮುವಿನ ಚಡ್ಡಾ ಕ್ಯಾಂಪ್ ಬಳಿ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಓರ್ವ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಹುತಾತ್ಮರಾಗಿದ್ದಾರೆ ಎಂದು ತಿಳಿದು ಬಂದಿದೆ.

ಹಿರಿಯ ಸಿಐಎಸ್ಎಫ್ ಅಧಿಕಾರಿಯೊಬ್ಬರ ಪ್ರಕಾರ, ಬೆಳಗ್ಗೆ 4.25ರ ಸುಮಾರಿಗೆ ಬಸ್ ಬೆಳಗಿನ ಪಾಳಿಯ ಕರ್ತವ್ಯಕ್ಕೆ ತೆರಳುತ್ತಿದ್ದಾಗ ದಾಳಿ ನಡೆದಿದೆ. ದಾಳಿ ವೇಳೆ ಸಿಐಎಸ್ಎಫ್ ಕೂಡ ಪರಿಣಾಮಕಾರಿಯಾಗಿ ಪ್ರತಿದಾಳಿ ನಡೆಸಿದೆ.

ಭಯೋತ್ಪಾದಕರನ್ನು ಓಡಿ ಹೋಗುವಂತೆ ಮಾಡಿದೆ. ಈ ವೇಳೆ ಸಿಐಎಸ್‌ಎಫ್‌ನ ಒಬ್ಬ ಸಹಾಯಕ ಸಬ್ ಇನ್‌ಸ್ಪೆಕ್ಟರ್ (ಎಎಸ್‌ಐ) ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ:ಗೋರಖ್​ನಾಥ್​ ದೇವಾಲಯ, ತಾಜ್​ ಮಹಲ್​ ಮೇಲೆ ಉಗ್ರರ ಕಣ್ಣು.. ತಪಾಸಣೆ ನಡೆಸಿದ್ದ ಯುಪಿ ಪೊಲೀಸರಿಂದ ಹೈಅಲರ್ಟ್​..

ABOUT THE AUTHOR

...view details