ಶ್ರೀನಗರ(ಜಮ್ಮು ಮತ್ತು ಕಾಶ್ಮೀರ):ಭಯೋತ್ಪಾದಕ ಸಂಘಟನೆಗಳಾದ ದಿ ರೆಸಿಸ್ಟೆಂಟ್ ಫ್ರಂಟ್/ ಲಷ್ಕರ್-ಇ-ತೈಯ್ಬಾದ ಇಬ್ಬರು ಸ್ಥಳೀಯ ಹೈಬ್ರಿಡ್ ಉಗ್ರರನ್ನು ಶ್ರೀನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 15 ಪಿಸ್ತೂಲ್‌ಗಳು, 30 ಮ್ಯಾಗಜೀನ್‌ಗಳು, 300 ರೌಂಡ್ಸ್ ಗುಂಡುಗಳು ಮತ್ತು ಒಂದು ಸೈಲೆನ್ಸರ್ ಜಪ್ತಿ ಮಾಡಲಾಗಿದೆ. ಭಯೋತ್ಪಾದಕರ ವಿರುದ್ಧ ಸಂಬಂಧಿತ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಕಾಶ್ಮೀರ ಐಜಿಪಿ ಮಾಹಿತಿ ನೀಡಿದ್ದಾರೆ.
ಕಾಶ್ಮೀರದಲ್ಲಿ ಇಬ್ಬರು ಹೈಬ್ರಿಡ್ ಉಗ್ರರ ಬಂಧನ; ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ - ಹೈಬ್ರಿಡ್ ಉಗ್ರರು
ಜಮ್ಮು ಕಾಶ್ಮೀರದಲ್ಲಿ ಪಾಕ್ ಪ್ರಚೋದಿತ ಉಗ್ರರ ಅಟ್ಟಹಾಸಕ್ಕೆ ಕಡಿವಾಣ ಬಿದ್ದಿದ್ದು ನಿಜ. ಆದರೆ, ಸ್ಥಳೀಯವಾಗಿ ಹುಟ್ಟಿಕೊಳ್ಳುತ್ತಿರುವ ಹೈಬ್ರಿಡ್ ಉಗ್ರರ ಜಾಲದ ಹುಟ್ಟಡಗಿಸುವ ಕೆಲಸವನ್ನು ಜಮ್ಮು ಕಾಶ್ಮೀರ ಪೊಲೀಸರು ಮತ್ತು ಭಾರತೀಯ ಸೇನೆ ನಿರಂತರವಾಗಿ ನಡೆಸುತ್ತಿದೆ.
ಗನ್
Last Updated : May 23, 2022, 1:04 PM IST