ಬಾರಾಮುಲ್ಲಾ(ಜಮ್ಮು-ಕಾಶ್ಮೀರ): ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ ಜೊತೆ ಸಂಪರ್ಕ ಹೊಂದಿದ್ದ ಭಯೋತ್ಪಾದಕ ಸಹಚರನ ಭದ್ರತಾ ಪಡೆಗಳು ಬಂಧನ ಮಾಡಿವೆ. ಬಂಧಿತ ವ್ಯಕ್ತಿಯಿಂದ AK 56 ರೈಫಲ್, ಮ್ಯಾಗಜೀನ್ ಮತ್ತು 30 ಜೀವಂತ ಗುಂಡು ವಶಕ್ಕೆ ಪಡೆದುಕೊಳ್ಳಲಾಗಿದೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿರುವ ಸೋಪೋರ್ ಪೊಲೀಸರು ಫಿರ್ದೌಸ್ ಅಹ್ಮದ್ ಎಂಬಾತನ ಬಂಧನ ಮಾಡಿದ್ದಾರೆ. ಈತನ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.