ಬಾರಾಮುಲ್ಲಾ(ಜಮ್ಮು ಕಾಶ್ಮೀರ): ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಗುಂಡಿನ ಚಕಮಕಿ ನಡೆಯುತ್ತಿದ್ದು, ಈ ವೇಳೆ ಮೂವರು ಸೈನಿಕರು ಮತ್ತು ಒಬ್ಬ ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಸಣ್ಣ ಪ್ರಮಾಣದಲ್ಲಿ ಗಾಯವಾಗಿದೆ ಎಂದು ಕಾಶ್ಮೀರ ಪೊಲೀಸ್ ಮಹಾನಿರೀಕ್ಷಕ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.
ಬಾರಾಮುಲ್ಲಾ ಎನ್‌ಕೌಂಟರ್: ಮೂವರು ಯೋಧರು, ಓರ್ವ ಅಪ್ರಾಪ್ತನಿಗೆ ಗಾಯ - ಮಾಲ್ವಾದಲ್ಲಿ ಎನ್‌ಕೌಂಟರ್
ಜಮ್ಮು ಕಾಶ್ಮೀರದ ಬಾರಾಮುಲ್ಲಾದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಎನ್‌ಕೌಂಟರ್ ನಡೆದಿದ್ದು, ಮೂವರು ಯೋಧರು ಮತ್ತು ಓರ್ವ ಅಪ್ರಾಪ್ತನಿಗ ಗಾಯವಾಗಿದೆ ಎಂದು ಕಾಶ್ಮೀರ ಪೊಲೀಸ್ ಮಹಾನಿರೀಕ್ಷಕ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.
ಬಾರಾಮುಲ್ಲಾ ಎನ್‌ಕೌಂಟರ್: ಮೂವರು ಯೋಧರು, ಓರ್ವ ಅಪ್ರಾಪ್ತನಿಗೆ ಗಾಯ
ಬಾರಾಮುಲ್ಲಾ ಜಿಲ್ಲೆಯ ಮಾಲ್ವಾದಲ್ಲಿ ಎನ್‌ಕೌಂಟರ್ ನಡೆದಿದೆ ಎಂದು ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ. ಭಯೋತ್ಪದಕರ ವಿರುದ್ಧ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ವಿಜಯ್ಕುಮಾರ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಭಯೋತ್ಪಾದಕರ ವಿರುದ್ಧ ಬದ್ಗಾಂ ಪೊಲೀಸರು ಮತ್ತು ಸೇನೆಯು ಜಂಟಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಬಿಹಾರದ ಈ ಗ್ರಾಮ ಐಐಟಿಯನ್ನರ ಫ್ಯಾಕ್ಟರಿ; ಪ್ರತಿ ಕುಟುಂಬದಲ್ಲೊಬ್ಬ ಐಐಟಿ ವಿದ್ಯಾರ್ಥಿ