ಕರ್ನಾಟಕ

karnataka

ETV Bharat / bharat

1.13 ಲಕ್ಷ ಮಂದಿಗೆ ಕೊರೊನಾ ಲಸಿಕೆ ನೀಡಿದ ಜಮ್ಮು ಕಾಶ್ಮೀರದ 'ಅಭಿಲಾಷಾ'

ಜಮ್ಮು ಕಾಶ್ಮೀರದ ಮುಂಚೂಣಿ ಆರೋಗ್ಯ ಕಾರ್ಯಕರ್ತೆ ಅಭಿಲಾಷಾ ಎಂಬುವವರು ಕೊರೊನಾ ಲಸಿಕಾ ಅಭಿಯಾನದಲ್ಲಿ 1.13 ಲಕ್ಷ ಮಂದಿಗೆ ಲಸಿಕೆ ನೀಡಿದ್ದಾರೆ. ಇವರನ್ನು ಇಂದು ಮಹಿಳಾ ದಿನದ ಅಂಗವಾಗಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್​​ ಮಾಂಡವೀಯಾ ಸನ್ಮಾನಿಸಿದ್ದಾರೆ.

abhilasha
ಅಭಿಲಾಷಾ

By

Published : Mar 8, 2022, 9:42 PM IST

ನವದೆಹಲಿ:ಅಂತಾರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೊರೊನಾ ವಿರುದ್ಧ ಮುಂಚೂಣಿಯಲ್ಲಿ ನಿಂತು ಅತ್ಯಧಿಕ ಪ್ರಮಾಣದಲ್ಲಿ ಲಸಿಕೆ ವಿತರಿಸಿದ ಮಹಿಳಾ ಆರೋಗ್ಯ ಸಿಬ್ಬಂದಿಯನ್ನು ಕೇಂದ್ರ ಸರ್ಕಾರ ಸನ್ಮಾನಿಸಿದೆ.

ಜಮ್ಮು ಕಾಶ್ಮೀರದಲ್ಲಿ ಲಸಿಕೆ ವಿತರಣಾ ಅಭಿಯಾನದಲ್ಲಿ ಕಾರ್ಯನಿರ್ವಹಿಸಿದ ಅಭಿಲಾಷಾ ಎಂಬುವವರು ಬರೋಬ್ಬರಿ 1,13,998 ಮಂದಿಗೆ ಲಸಿಕೆ ಹಾಕಿದ್ದು, ಅವರನ್ನು ಕೇಂದ್ರ ಸಚಿವ ಮನ್ಸುಖ್​​ ಮಾಂಡವೀಯಾ ಸನ್ಮಾನಿಸಿದರು.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅಭಿಲಾಷಾ, ಆರಂಭದಲ್ಲಿ ಜನ ಲಸಿಕೆ ಪಡೆಯಲು ಮುಂದಾಗುತ್ತಿರಲಿಲ್ಲ. ಲಸಿಕೆ ವಿತರಣೆಯೇ ಸವಾಲಾಗಿತ್ತು. ಈ ವೇಳೆ ಲಸಿಕೆಯ ಲಾಭಗಳ ಬಗ್ಗೆ ಅರಿವು ಮೂಡಿಸಿದ ಬಳಿಕ ಜನರು ಬರಲು ಆರಂಭಿಸಿದರು ಎಂದರು.

ಲಸಿಕಾ ಅಭಯಾನ ಆರಂಭದಿಂದ ಈವರೆಗೂ 1.13 ಲಕ್ಷ ಮಂದಿಗೆ ನಾನು ಕೊರೊನಾ ಲಸಿಕೆ ಹಾಕಿದ್ದೇನೆ ಎಂದ ಅವರು, ಕೇಂದ್ರ ಸರ್ಕಾರದ ಲಸಿಕಾ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ಸೂಚಿಸಿದರು.

ಇದನ್ನೂ ಓದಿ:ರಷ್ಯಾದಿಂದ ತೈಲ, ನೈಸರ್ಗಿಕ ಅನಿಲ ಖರೀದಿ ಸ್ಥಗಿತ: ಶೆಲ್‌ ಘೋಷಣೆ

ABOUT THE AUTHOR

...view details