ಶ್ರೀನಗರ(ಜಮ್ಮು-ಕಾಶ್ಮೀರ):ಕುತಂತ್ರಿಪಾಕಿಸ್ತಾನ ಗಡಿಭಾಗದಲ್ಲಿ ಒಂದಿಲ್ಲೊಂದು ಕಿತಾಪತಿ ಮಾಡುತ್ತಲೇ ಇರುತ್ತದೆ. ಇದೀಗ ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಪ್ರದೇಶದಲ್ಲಿ ಪಾಕಿಸ್ತಾನ ಸೈನಿಕರು ಅಕ್ರಮವಾಗಿ ಬಂಕರ್ ಅಥವಾ ಪೋಸ್ಟ್ ನಿರ್ಮಾಣ ಮಾಡುತ್ತಿದ್ದು, ಅದಕ್ಕೆ ಭಾರತೀಯ ಸೇನೆ ಆಕ್ಷೇಪ ವ್ಯಕ್ತಪಡಿಸಿದೆ.
ಕುಪ್ವಾರದ ಥೀತ್ವಾಲ್ ಪ್ರದೇಶದಲ್ಲಿ ಗಡಿ ನಿಯಂತ್ರಣ ರೇಖೆಯ ಸಮೀಪ ಪಾಕಿಸ್ತಾನ ರೇಂಜರ್‌ಗಳು ಅಕ್ರಮವಾಗಿ ನಿರ್ಮಾಣ ಚಟುವಟಿಕೆ ಕೈಗೊಂಡಿರುವುದನ್ನು ಭಾರತೀಯ ಸೈನಿಕರು ಗಮನಿಸಿದ್ದಾರೆ. ಭಾರತದ ಭೂಭಾಗದ ಕಡೆಯಿಂದ 500 ಮೀಟರ್ ಅಂತರದೊಳಗೆ ನಿರ್ಮಾಣ ಕಾರ್ಯ ನಡೆಯುತ್ತಿರುವುದರಿಂದ ಧ್ವನಿವರ್ಧಕಗಳ ಮೂಲಕ ಭಾರತೀಯ ಸೇನೆಯಿಂದ ಆಕ್ಷೇಪಣೆ ಎತ್ತಿದೆ.