ಪೂಂಚ್ (ಜಮ್ಮು-ಕಾಶ್ಮೀರ):ಪೂಂಚ್ ಜಿಲ್ಲೆಯ ಕೀರ್ನಿ ಮತ್ತು ಕಾಸ್ಬಾ ವಲಯಗಳ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಸೇನೆಯು ಮತ್ತೆ ಕದನ ವಿರಾಮ ಉಲ್ಲಂಘಿಸಿದೆ.
ಜಮ್ಮು-ಕಾಶ್ಮೀರ: ಪೂಂಚ್ನಲ್ಲಿ ಪಾಕ್ ಸೇನೆಯಿಂದ ಶೆಲ್ ದಾಳಿ - ಜಮ್ಮುವಿನಲ್ಲಿ ಪಾಕ್ ಸೇನೆಯಿಂದ ಕದನ ವಿರಾಮ ಉಲ್ಲಂಘಣೆ
ಪಾಕಿಸ್ತಾನ ಸೇನೆಯು ಭಾನುವಾರ ಪೂಂಚ್ ಜಿಲ್ಲೆಯ ಕೀರ್ನಿ ಮತ್ತು ಕಾಸ್ಬಾ ಸೆಕ್ಟರ್‌ನಲ್ಲಿ ಗಡಿಯುದ್ದಕ್ಕೂ ಕದನ ವಿರಾಮ ಉಲ್ಲಂಘಿಸಿದೆ. ಈ ಪ್ರದೇಶದಲ್ಲಿ ಭಾರೀ ಪ್ರಮಾಣದ ಶೆಲ್ ದಾಳಿ ಮಾಡಿರುವ ಬಗ್ಗೆ ವರದಿಯಾಗಿದೆ.

ಪೂಂಚ್ ಜಿಲ್ಲೆಯಲ್ಲಿ ಪಾಕ್ ಸೇನೆಯಿಂದ ಶೆಲ್ ದಾಳಿ
ಮಂದಾರ್ ಪಂಚಾಯತ್‌ನ ಇಲಾಕೊದ ಜನವಸತಿ ಪ್ರದೇಶದ ಬಳಿ ಪಾಕ್ ಸೈನಿಕರು ಮಾರ್ಟರ್ ಮತ್ತು ಸಣ್ಣ ಶಸ್ತ್ರಾಸ್ತ್ರಗಳ ಸಹಿತ ಗುಂಡಿನ ದಾಳಿ ನಡೆಸಿದ್ದಾರೆ.
ನಾಗರಿಕ ಮೊಹಮ್ಮದ್ ಕಪೀಲ್ ಎಂಬವರ ಮನೆ ಮೇಲೆ ಶೆಲ್ ದಾಳಿ ನಡೆದಿದ್ದು, ಮೊಹಮ್ಮದ್ ಅವರ ಕುಟುಂಬ ಸದಸ್ಯರು ರಾತ್ರಿಯಿಡೀ ಶೆಲ್ ದಾಳಿಯಿಂದ ತಪ್ಪಿಸಿಕೊಂಡು ಪ್ರಾಣ ಕಾಪಾಡಿಕೊಂಡಿದ್ದಾರೆ ಎನ್ನಲಾಗಿದೆ.