ಶ್ರೀನಗರ (ಜಮ್ಮು ಕಾಶ್ಮೀರ):ಜಮ್ಮು ಕಾಶ್ಮೀರ ಶಾಸಕಾಂಗವು ಜಾರಿಗೆ ತಂದಿರುವ ಕಾನೂನುಗಳಲ್ಲಿ 64 ದೋಷಗಳನ್ನು ಸರಿಪಡಿಸಲು ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆಯಲ್ಲಿ, ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆಯ ಸೆಕ್ಷನ್ 96 ರ ಅಡಿಯಲ್ಲಿ ಹೊರಡಿಸಲಾದ ನಾಲ್ಕು ಆದೇಶಗಳಲ್ಲಿನ ತಪ್ಪುಗಳನ್ನು ಸರಿಪಡಿಸಲು ಗೃಹಸಚಿವಾಲಯ ಸೂಚಿಸಿದೆ. ಇದು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ಗೆ ಅನ್ವಯವಾಗುವ ಕಾನೂನುಗಳನ್ನು ತಿದ್ದುಪಡಿ ಮಾಡಲು ಅಥವಾ ರದ್ದುಗೊಳಿಸಲು ಅಧಿಕಾರ ನೀಡಿದೆ.
ಸೆಕ್ಷನ್ 96 ರ ಅಡಿಯಲ್ಲಿ, ಮರುಸಂಘಟನೆ ಕಾಯ್ದೆಯ ಮೂಲಕ ಜಮ್ಮುಕಾಶ್ಮೀರಕ್ಕೆ ಅನ್ವಯವಾಗುವ ಕಾನೂನುಗಳನ್ನು ತಿದ್ದುಪಡಿ ಮಾಡಲು ಹಾಗೂ ರದ್ದು ಪಡಿಸಲು ಕೇಂದ್ರಕ್ಕೆ ಅಧಿಕಾರ ನೀಡಲಾಯಿತು.