ಕರ್ನಾಟಕ

karnataka

ETV Bharat / bharat

ನಿರ್ಮಾಣ ಹಂತದ ವಿದ್ಯುತ್​​ ಕೇಂದ್ರದಲ್ಲಿ ಭಾರಿ ಭೂಕುಸಿತ: ಓರ್ವ ಸಾವು, ಹಲವರು ಸಿಲುಕಿರುವ ಶಂಕೆ - landslide hits power project site

ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ನ ನಿರ್ಮಾಣ ಹಂತದಲ್ಲಿ ರಾಟಲ್ ಪವರ್ ಪ್ರಾಜೆಕ್ಟ್ ಸ್ಥಳದಲ್ಲಿ ಭಾರಿ ಭೂಕುಸಿತ ಉಂಟಾಗಿದೆ.

j-and-k-one-dead-several-trapped-as-landslide-hits-power-project-site
ನಿರ್ಮಾಣ ಹಂತದ ವಿದ್ಯುತ್​​ ಕೇಂದ್ರದಲ್ಲಿ ಭಾರಿ ಭೂಕುಸಿತ: ಓರ್ವ ಸಾವು, ಹಲವರು ಸಿಲುಕಿರುವ ಶಂಕೆ

By

Published : Oct 29, 2022, 10:40 PM IST

ಕಿಶ್ತ್ವಾರ್ (ಜಮ್ಮು ಮತ್ತು ಕಾಶ್ಮೀರ): ಬೃಹತ್ ಪವರ್ ಪ್ರಾಜೆಕ್ಟ್ ಸ್ಥಳದಲ್ಲಿ ಭಾರಿ ಭೂಕುಸಿತ ಸಂಭವಿಸಿದ ಓರ್ವ ಸಾವನ್ನಪ್ಪಿದ್ದು, ಹಲವು ಕಾರ್ಮಿಕರು ಅವಶೇಷಗಳಡಿಯಲ್ಲಿ ಸಿಲುಕಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ಶನಿವಾರ ಸಂಭವಿಸಿದೆ.

ಇಲ್ಲಿನ ನಿರ್ಮಾಣ ಹಂತದಲ್ಲಿ ರಾಟಲ್ ಪವರ್ ಪ್ರಾಜೆಕ್ಟ್ ಸ್ಥಳದಲ್ಲಿ ಈ ದುರ್ಘಟನೆ ನಡೆದಿದೆ. ಭೂ ಕುಸಿತದಿಂದ ಮೊದಲಿಗೆ ಓರ್ವ ಚಾಲಕ ಸಿಲುಕಿದ್ದ. ಹೀಗಾಗಿಯೇ ಆತನ ನೆರವಿಗೆ ಇತರ ಕಾರ್ಮಿಕರು ಧಾವಿಸಿದರು. ಈ ಸಮಯದಲ್ಲಿ ಮತ್ತೆ ಭೂಕುಸಿತ ಉಂಟಾಗಿ ಹಲವರು ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗ್ತಿದೆ.

ಈ ವಿಷಯ ತಿಳಿದ ಪೊಲೀಸರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸೇನೆ ಮತ್ತು ಎಸ್‌ಡಿಆರ್‌ಎಫ್ ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಜಿಲ್ಲಾಡಳಿತಕ್ಕೆ ಅಗತ್ಯವಿರುವ ಎಲ್ಲ ನೆರವು ನೀಡುವಂತೆ ಸೂಚಿಸಲಾಗಿದೆ ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:ಮತ್ತೆ ವಂದೇ ಭಾರತ್ ರೈಲು ಜಾನುವಾರುಗೆ ಡಿಕ್ಕಿ: 15 ನಿಮಿಷ ಸಂಚಾರ ವಿಳಂಬ

ABOUT THE AUTHOR

...view details