ಕರ್ನಾಟಕ

karnataka

ETV Bharat / bharat

ಜಮ್ಮು-ಕಾಶ್ಮೀರದ ಶೋಪಿಯಾನ್​ನಲ್ಲಿ ಯೋಧರ ಗುಂಡೇಟಿಗೆ ಉಗ್ರ ಬಲಿ - ಜಮ್ಮು- ಕಾಶ್ಮೀರದಲ್ಲಿ ಮತ್ತೊಬ್ಬ ಉಗ್ರ ಹತ

ಉತ್ತರ ಜಮ್ಮು ಕಾಶ್ಮೀರದ ಶೋಪಿಯಾನ್​ನ ಕಿಲ್ಬಾಲ್​ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆ ಎಂಬ ಮಾಹಿತಿ ಮೇರೆಗೆ ಯೋಧರು ಮತ್ತು ಸಿಆರ್​ಪಿಎಫ್​ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದಾಗ, ಓರ್ವ ಉಗ್ರ ಹತನಾಗಿದ್ದಾನೆ. ಅಲ್ಲದೇ, ಇನ್ನೊಬ್ಬ ಉಗ್ರ ಸಿಕ್ಕಿಬಿದ್ದಿದ್ದು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ..

militant-killed
ಉಗ್ರ ಬಲಿ

By

Published : Jan 22, 2022, 6:56 PM IST

ಶೋಪಿಯಾನ್​(ಜಮ್ಮು-ಕಾಶ್ಮೀರ) :ಕಾಶ್ಮೀರ ಕಣಿವೆಯಲ್ಲಿ ಗುಂಡೇಟಿಗೆ ಮತ್ತೊಬ್ಬ ಉಗ್ರನೊಬ್ಬ ಹತನಾಗಿದ್ದಾನೆ. ಜಮ್ಮು-ಕಾಶ್ಮೀರದ ಶೋಪಿಯಾನ್​ನಲ್ಲಿ ಶನಿವಾರ ನಡೆದ ಗುಂಡಿನ ಚಕಮಕಿಯಲ್ಲಿ ಅಪರಿಚಿತ ಭಯೋತ್ಪಾದಕನೊಬ್ಬ ಗುಂಡೇಟಿಗೆ ಬಲಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರ ಜಮ್ಮು-ಕಾಶ್ಮೀರದ ಶೋಪಿಯಾನ್​ನ ಕಿಲ್ಬಾಲ್​ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆ ಎಂಬ ಮಾಹಿತಿ ಮೇರೆಗೆ ಯೋಧರು ಮತ್ತು ಸಿಆರ್​ಪಿಎಫ್​ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದಾಗ, ಓರ್ವ ಉಗ್ರ ಹತನಾಗಿದ್ದಾನೆ.

ಅಲ್ಲದೇ, ಇನ್ನೊಬ್ಬ ಉಗ್ರ ಸಿಕ್ಕಿ ಬಿದ್ದಿದ್ದು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಜಂಟಿ ಕಾರ್ಯಾಚರಣೆ ವೇಳೆ ಯೋಧರು ಮತ್ತು ಉಗ್ರರ ಮಧ್ಯೆ ತೀವ್ರ ಗುಂಡಿನ ಚಕಮಕಿ ನಡೆಯಿತು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಕಿವಿಯಲ್ಲಿ ನೋವು, ಶಿಳ್ಳೆ ಹೊಡೆದಂತೆ ಸದ್ದು, ಜುಮ್​ ಅಂದರೆ ಅದು ಒಮಿಕ್ರಾನ್​ ಸೋಂಕಿನ ಲಕ್ಷಣ!!

ABOUT THE AUTHOR

...view details