ಕರ್ನಾಟಕ

karnataka

ETV Bharat / bharat

ಪೂಂಚ್ ಬಳಿ ಲ್ಯಾಂಡ್‌ಮೈನ್‌ಗಳಿಗೆ ಬೆಂಕಿ: ಭಯೋತ್ಪಾದಕರ ಕೃತ್ಯದ ಶಂಕೆ - ಜಮ್ಮು-ಕಾಶ್ಮೀರ ಇತ್ತೀಚಿನ ಸುದ್ದಿ

ಪೂಂಚ್​ ಸೆಕ್ಟರ್​ನ ಇಲಾಕೋ ಬಳಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಬೆಂಕಿ ಕಾಣಿಸಿಕೊಂಡಿದ್ದು, ಉಗ್ರರ ಒಳನುಸುಳುವಿಕೆ ತಡೆಗಟ್ಟಲು ಬಳಸುವ ಲ್ಯಾಂಡ್‌ಮೈನ್‌ಗಳನ್ನು ಭಯೋತ್ಪಾದಕರು ಸುಟ್ಟುಹಾಕಿರುವುದಾಗಿ ಮೂಲಗಳು ತಿಳಿಸಿವೆ.

poonch
ಲ್ಯಾಂಡ್‌ಮೈನ್‌ಗಳಿಗೆ ಬೆಂಕಿ

By

Published : Feb 1, 2021, 8:57 PM IST

ಶ್ರೀನಗರ:ಜಮ್ಮು- ಕಾಶ್ಮೀರದ ಪೂಂಚ್​ನಲ್ಲಿರುವ ಗಡಿ ನಿಯಂತ್ರಣ ರೇಖೆಯಲ್ಲಿ ಉಗ್ರರ ಒಳನುಸುಳುವಿಕೆ ತಡೆಗಟ್ಟಲು ಕೆಲ ಸಾಧನ ಲ್ಯಾಂಡ್‌ಮೈನ್‌ಗಳನ್ನು ಬಳಸಲಾಗುತ್ತದೆ. ಆದರೆ ಆ ಸಾಧನಗಳಿಗೆ ಭಯೋತ್ಪಾದಕರು ಬೆಂಕಿ ಹಚ್ಚಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

ಪೂಂಚ್​ ಸೆಕ್ಟರ್​ನ ಇಲಾಕೊ ಬಳಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಬೆಂಕಿ ಕಾಣಿಸಿಕೊಂಡಿದ್ದು, ಹಲವು ಕಿ.ಮೀವರೆಗೆ ಬೆಂಕಿಯ ಕೆನ್ನಾಲಿಗೆ ಮತ್ತು ಹೊಗೆ ಕಾಣಿಸಿಕೊಂಡಿದೆ.

ಇದನ್ನು ಓದಿ: ನಿರ್ಮಲಾ ಬಜೆಟ್​​ನಲ್ಲಿ ಯಾವ ವಲಯಕ್ಕೆ ಎಷ್ಟು ಪಾಲು, ಬಂದದೆಷ್ಟು- ಖರ್ಚಾಗಿದೆಷ್ಟು? ಇಲ್ಲಿದೆ ಡಿಟೆಲ್ಸ್​

ಅನೇಕ ಬಾರಿ ಭಯೋತ್ಪಾದಕರು ಅಥವಾ ಪಾಕಿಸ್ತಾನಿ ಸೈನಿಕರು ದೇಶದ ಗಡಿಯೊಳಗೆ ಒಳನುಳುಸುವ ಉದ್ದೇಶದಿಂದ ಲ್ಯಾಂಡ್‌ಮೈನ್‌ಗಳನ್ನು ನಾಶಮಾಡಿದ್ದರು. ಆದರೆ, ಭಾರತೀಯ ಸೈನಿಕರ ಕಣ್ಗಾವಲಿನಿಂದ ಉಗ್ರರ ಒಳನುಸುಳಿವಿಕೆ ತಡೆಯಲಾಗಿದೆ.

ABOUT THE AUTHOR

...view details