ವಾರಣಾಸಿ :ಉತ್ತರ ಪ್ರದೇಶದ ವಾರಣಾಸಿಯ ಹೊರವಲಯದಲ್ಲಿ ಶುಕ್ರವಾರ ಸಂಭವಿಸಿದ ಕಾರು ಅಪಘಾತದಲ್ಲಿ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೂಲಗಳ ಪ್ರಕಾರ, ಸಿನ್ಹಾ ಅವರು ಘಾಜಿಪುರಕ್ಕೆ ಹೋಗುತ್ತಿದ್ದಾಗ ಅಪಘಾತವಾಗಿದೆ. ಅವರ ಕಾರು ರಾಜ್‌ಘಾಟ್ ಸೇತುವೆಯ (ಮಾಳವೀಯ ಸೇತುವೆ) ಇಳಿಜಾರಿನಲ್ಲಿದ್ದ ಕಬ್ಬಿಣದ ಪಿಲ್ಲರ್‌ಗೆ ಡಿಕ್ಕಿ ಹೊಡೆದಿದೆ. ಕಾರಿನ ಎಡಭಾಗಕ್ಕೆ ಹಾನಿಯಾಗಿದ್ದು, ಒಂದು ಟೈರ್ ಪಂಕ್ಚರ್ ಆಗಿದೆ ಎಂದು ಮೂಲಗಳು ತಿಳಿಸಿವೆ.