ರಿಯಾಸಿ(ಜಮ್ಮು ಕಾಶ್ಮೀರ): ರಿಯಾಸಿ ಜಿಲ್ಲೆಯಲ್ಲಿ ಗ್ರಾಮಸ್ಥರಿಂದ ಬಂಧಿಸಲ್ಪಟ್ಟ ಇಬ್ಬರು ಶಸ್ತ್ರಸಜ್ಜಿತ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕರಲ್ಲಿ ಒಬ್ಬ ಕೆಲ ದಿನಗಳ ವರೆಗೂ ಬಿಜೆಪಿ ನಾಯಕರಾಗಿದ್ದ ಮತ್ತು ಜಮ್ಮು ಪ್ರಾಂತ್ಯದ ಅಲ್ಪಸಂಖ್ಯಾತ ಮೋರ್ಚಾ ಐಟಿ ಸೆಲ್ ಅನ್ನು ನಿರ್ವಹಿಸುತ್ತಿದ್ದ ಎಂಬ ಆತಂಕಕಾರಿ ವಿಷಯ ಹೊರಬಿದ್ದಿದೆ. ತುಕ್ಸಾನ್ ಧೋಕ್ ಗ್ರಾಮದಲ್ಲಿ ಇಬ್ಬರು ಉಗ್ರರನ್ನು ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.
ಬಂಧಿತನಾದ ಎಲ್‌ಇಟಿ ಭಯೋತ್ಪಾದಕ ಗಣ್ಯರ ಜೊತೆ ಬಂಧಿತ ಭಯೋತ್ಪಾದಕರಲ್ಲಿ ಮೋಸ್ಟ್ ವಾಂಟೆಡ್ ಎಲ್ಇಟಿ ಕಮಾಂಡರ್ ತಾಲಿಬ್ ಹುಸೇನ್ ಸೇರಿದ್ದಾನೆ. ಈತ ರಜೌರಿ ಜಿಲ್ಲೆಯ ನಿವಾಸಿ ಮತ್ತು ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಐಇಡಿ ಸ್ಫೋಟಗಳ ಮಾಸ್ಟರ್ ಮೈಂಡ್ ಕೂಡ ಹೌದು. ತಾಲಿಬ್ ಬಿಜೆಪಿಯ ಸದಸ್ಯನಾಗಿದ್ದನಂತೆ. ಎರಡು ತಿಂಗಳ ಹಿಂದೆ ಜಮ್ಮು ಪ್ರಾಂತ್ಯದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಐಟಿ ಮತ್ತು ಸಾಮಾಜಿಕ ಮಾಧ್ಯಮ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದನಂತೆ. ವರದಿಗಳ ಪ್ರಕಾರ, ತಾಲಿಬ್ ನ್ಯೂಸ್ ಪೋರ್ಟಲ್ ಅನ್ನು ಸಹ ನಡೆಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತನಾದ ಎಲ್‌ಇಟಿ ಭಯೋತ್ಪಾದಕ ಗಣ್ಯರ ಜೊತೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಅವರು ಗ್ರಾಮಸ್ಥರ ಧೈರ್ಯವನ್ನು ಶ್ಲಾಘಿಸಿದ್ದಾರೆ. ಹಾಗೆ ನಗದು ಬಹುಮಾನವನ್ನು ಸಹ ಘೋಷಿಸಿದ್ದಾರೆ.
ಆದೇಶ ಪ್ರತಿ ವೈರಲ್: ಆರೋಪಿಯು ಅಧ್ಯಕ್ಷ ರವೀಂದ್ರ ರೈನಾ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರೊಂದಿಗೆ ಶಾ ಚಿತ್ರಗಳನ್ನು ತೆಗೆಸಿಕೊಂಡಿದ್ದಾನೆ. ತಾಲಿಬ್ ಹುಸೇನ್ ಶಾ, ಬುಧಾನ್ ಜಿಲ್ಲೆಯ ರಾಜೌರಿಯ ದ್ರಾಜ್ ಕೊಟ್ರಂಕಾದಲ್ಲಿ ಹೊಸ ಐಟಿ ಮತ್ತು ಸಾಮಾಜಿಕ ಮಾಧ್ಯಮ ಉಸ್ತುವಾರಿ ವಹಿಸಿಕೊಂಡಿದ್ದ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಆದೇಶದಲ್ಲಿ ಉಲ್ಲೇಖವಾಗಿದೆ.
ಈ ಘಟನೆ ಹಿನ್ನೆಲೆ ಯಾವುದೇ ಹಿನ್ನೆಲೆಯ ಪರಿಶೀಲನೆಯಿಲ್ಲದೆ ಜನರು ಪಕ್ಷಕ್ಕೆ ಸೇರಲು ಅನುವು ಮಾಡಿಕೊಡುವ ಆನ್‌ಲೈನ್ ಸದಸ್ಯತ್ವ ವ್ಯವಸ್ಥೆಯನ್ನು ಬಿಜೆಪಿ ಕಾರ್ಯಕರ್ತರು ದೂಷಿಸಿದ್ದಾರೆ. ಇದೊಂದು ಹೊಸ ಮಾದರಿ ಎಂದು ನಾನು ಹೇಳುತ್ತೇನೆ. ಬಿಜೆಪಿಗೆ ಪ್ರವೇಶಿಸುವುದು, ಈ ಮೂಲಕ ಉನ್ನತ ಮಟ್ಟದ ನಾಯಕರನ್ನು ಕೊಲ್ಲುವ ಸಂಚು ಮಾಡಿದ್ದನ್ನು ಪೊಲೀಸರು ಭೇದಿಸಿದ್ದಾರೆ ಎಂದು ಬಿಜೆಪಿ ಆರ್‌ಎಸ್ ಪಠಾನಿಯಾ ಹೇಳಿದ್ದಾರೆ.
ವರದಿಯ ಪ್ರಕಾರ, ಬಿಜೆಪಿ ಈ ವರ್ಷ ಮೇ 9 ರಂದು ಜಮ್ಮು ಪ್ರಾಂತ್ಯದ ಪಕ್ಷದ ಐಟಿ ಮತ್ತು ಸಾಮಾಜಿಕ ಮಾಧ್ಯಮದ ಉಸ್ತುವಾರಿಯಾಗಿ ಹುಸೇನ್ ಶಾನನ್ನು ನೇಮಿಸಿತ್ತು ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಶಿವಮೊಗ್ಗದಲ್ಲಿ ರೌಡಿ ಪರೇಡ್.. ದುಷ್ಕೃತ್ಯದಲ್ಲಿ ತೊಡಗುವ ರೌಡಿಗಳಿಗೆ ಎಸ್ಪಿ ಖಡಕ್ ಎಚ್ಚರಿಕೆ