ಕರ್ನಾಟಕ

karnataka

ETV Bharat / bharat

ಯಾತ್ರಾರ್ಥಿಗಳ ಹೊತ್ತೊಯ್ಯುತ್ತಿದ್ದ ಬಸ್​​ಗೆ ದಿಢೀರ್ ಬೆಂಕಿ.. ನಾಲ್ವರು ಸಜೀವ ದಹನ - ಯಾತ್ರಾರ್ಥಿಗಳ ಬಸ್​ಗೆ ಬೆಂಕಿ

ಯಾತ್ರಾರ್ಥಿಗಳನ್ನ ಹೊತ್ತು ಸಾಗುತ್ತಿದ ಬಸ್​​​ವೊಂದರಲ್ಲಿ ದಿಢೀರ್​ ಆಗಿ ಬೆಂಕಿ ಕಾಣಿಸಿಕೊಂಡಿರುವ ಪರಿಣಾಮ ನಾಲ್ವರು ಸಜೀವ ದಹನವಾಗಿದ್ದಾರೆ.

bus caught fire in Katra
bus caught fire in Katra

By

Published : May 13, 2022, 5:46 PM IST

Updated : May 13, 2022, 10:04 PM IST

ಕತ್ರಾ(ಜಮ್ಮು-ಕಾಶ್ಮೀರ):ಯಾತ್ರಾರ್ಥಿಗಳನ್ನ ಹೊತ್ತೊಯ್ಯುತ್ತಿದ್ದ ಬಸ್​​​ಗೆ ದಿಡೀರ್​ ಬೆಂಕಿ ಹೊತ್ತಿಕೊಂಡಿರುವ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 22 ಜನರು ಗಾಯಗೊಂಡಿದ್ದಾರೆ. ಜಮ್ಮು-ಕಾಶ್ಮೀರದ ಕತ್ರಾದಲ್ಲಿ ಈ ಘಟನೆ ನಡೆದಿದೆ.

ಕತ್ರಾದಿಂದ ಜಮ್ಮುವಿಗೆ ಬಸ್​ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಬಸ್​​ನ ಇಂಜಿನ್​​​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲೇ ಇಡೀ ಬಸ್​​ಗೆ ಆವರಿಸಿಕೊಂಡಿದೆ. ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 22 ಜನರು ಗಾಯಗೊಂಡಿದ್ದಾರೆ. ಇವರನ್ನೆಲ್ಲ ಚಿಕಿತ್ಸೆಗೋಸ್ಕರ ಕತ್ರಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ:U19 ಮಾಜಿ ಬ್ಯಾಟರ್​ ಬಗ್ಗೆ ಗುಣಗಾನ.. ಆದಷ್ಟು ಬೇಗ ಟೀಂ ಇಂಡಿಯಾ ಪರ ಆಡಲಿದ್ದಾರೆ ಎಂದ ರೋಹಿತ್​​

ಕತ್ರಾದ ಮಾತಾ ವೈಷ್ಣೋ ದೇವಿಗೆ ಇವರೆಲ್ಲರೂ ತೆರಳುತ್ತಿದ್ದರು. ಘಟನಾ ಸ್ಥಳಕ್ಕೆ ತೆರಳಿರುವ ಅಗ್ನಿಶಾಮಕ ದಳ, ಮೃತ ಪ್ರಯಾಣಿಕರ ದೇಹಗಳನ್ನ ಹೊರತೆಗೆದಿದ್ದು, ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ ಎಂದಿದ್ದಾರೆ.

Last Updated : May 13, 2022, 10:04 PM IST

ABOUT THE AUTHOR

...view details