ನವದೆಹಲಿ :ನಾಗಿನ್ ಧಾರಾವಾಹಿ ಪಾತ್ರಗಳಲ್ಲಿ ಮತ್ತು ಕಥೆಯಲ್ಲಿ ಇರುವ ತಿರುವು ಹಾಗೂ ಕುತೂಹಲಗಳೇ ಜನರನ್ನು ಸೆಳೆಯುತ್ತಿರುವುದು. ಕಾಲ್ಪನಿಕ ಹಾಗೆ ಅಲೌಕಿಕ ಕತೆಗಳು ಜನರು ಹೆಚ್ಚು ಇಷ್ಟಪಡುತ್ತಿದ್ದಾರೆ. ಅಲೌಕಿಕ ಮತ್ತು ನೈಜತೆ ಇಲ್ಲದ ಕಥೆಗಳೇ ಹೆಚ್ಚು ಜನಪ್ರಿಯವಾಗುತ್ತಿವೆ.
ಕಾರಣ ಆ ರೀತಿಯ ಜೀವನ ಇದ್ದರೆ ಹೇಗಿರಬಹುದು ಎಂದು ಕಲ್ಪಿಸಿಕೊಳ್ಳಲು ಜನ ಬಯಸುತ್ತಾರೆ. ನಾನು ಚಿಕ್ಕವಳಿದ್ದಾಗ ಹ್ಯಾರಿ ಫಾಟರ್ ಅನ್ನು ನೋಡುತ್ತಿದ್ದೆ. ಅಲ್ಲಿಯ ಘಟನೆಗಳನ್ನು ನಿಜವೆಂಬಂತೆ ಭಾವಿಸುತ್ತಿದ್ದೆ ಎಂದು ಬಿಗ್ ಬಾಸ್ 15ರ ವಿಜೇತೆ ತೇಜಸ್ವಿ ಪ್ರಕಾಶ್ ಹೇಳಿದರು.
ಆಕಾರ ಬದಲಿಸುವ ಸರ್ಪಗಳ ಕಥೆಯ ನಾಗಿನ್ ಧಾರಾವಾಹಿ 2015ರಲ್ಲಿ ಪ್ರಾರಂಭವಾಗಿತ್ತು. ಮೊದಲ ಆವೃತ್ತಿಯಲ್ಲಿ ಮೌನಿ ರಾಯ್, ಅರ್ಜುನ್ ಬಿಜ್ಲಾನಿ, ಅದಾ ಖಾನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು.
ನಾಗಿನ್ 6ರ ಪ್ರಮುಖ ಪಾತ್ರಧಾರಿಯಾಗಿರುವ ತೇಜಸ್ವಿ ಪ್ರಕಾಶ್, ಆವೃತ್ತಿಯನ್ನ ಜನರು ಹೇಗೆ ಸ್ವೀಕರಿಸುತ್ತಾರೋ ಗೊತ್ತಿಲ್ಲ. ನನ್ನ ಮೇಲೆ ಜವಾಬ್ದಾರಿ ಹೆಚ್ಚಿದೆ. ಹಿಂದಿನ ಎಲ್ಲಾ ಆವೃತ್ತಿಗಳನ್ನು ಜನ ಮೆಚ್ಚಿದ್ದರು. ಆದರೆ, ಹಾರ್ಡ್‌ವರ್ಕ್ ಮಾಡುವುದು ನಮ್ಮ ಕರ್ತವ್ಯ. ನಮ್ಮ ಶ್ರಮವನ್ನು ಜನರು ಗುರುತಿಸುತ್ತಾರೆ ಎಂದು ಭಾವಿಸಿದ್ದೇನೆ ಎಂದರು.
ಇದನ್ನೂ ಓದಿ:ಪ್ರೇಮಿಗಳ ದಿನದಂದೇ ಸಪ್ತಪದಿ ತುಳಿದ ಸಲಿಂಗಿ ಜೋಡಿ ; ಅಪರೂಪದ ಮದುವೆಗೆ ಸಾಕ್ಷಿಯಾದ ಕೇರಳ