ಕರ್ನಾಟಕ

karnataka

ETV Bharat / bharat

ನಕ್ಸಲ್​ ಪೀಡಿತ ಪ್ರದೇಶದ ಮಕ್ಕಳಿಗೆ ಐಟಿಬಿಪಿ ಸಿಬ್ಬಂದಿಯಿಂದ ಸ್ಮಾರ್ಟ್ ಕ್ಲಾಸ್​!

ಕಂಪ್ಯೂಟರ್‌ಗಳು ಮತ್ತು ಪ್ರೊಜೆಕ್ಟರ್‌ಗಳಂತಹ ಎಲೆಕ್ಟ್ರಾನಿಕ್ ಉಪಕರಣಗಳ ಸಹಾಯದಿಂದ ಪದವೀಧರ ಐಟಿಬಿಪಿ ಸಿಬ್ಬಂದಿ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಯೂಟ್ಯೂಬ್ ಮತ್ತು ಇ-ಲರ್ನಿಂಗ್ ವೆಬ್‌ಸೈಟ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಸಾಕಷ್ಟು ಕಲಿಯಲು ಅವಕಾಶ ಮಾಡಿಕೊಡುತ್ತಿದ್ದಾರೆ..

ITBP helps children in red zone area, starts 'smart' classes in Chhattisgarh
ನಕ್ಸಲ್​ ಪೀಡಿತ ಪ್ರದೇಶದ ಮಕ್ಕಳಿಗೆ ಐಟಿಬಿಪಿ ಸಿಬ್ಬಂದಿಯಿಂದ ಸ್ಮಾರ್ಟ್ ಕ್ಲಾಸ್​

By

Published : Jan 18, 2021, 5:35 PM IST

ಛತ್ತೀಸ್​ಗಢ :ನಕ್ಸಲ್​ ಪೀಡಿತ ಪ್ರದೇಶವಾದ ಛತ್ತೀಸ್​ಗಢದ ಕೊಂಡಗಾಂವ್​ನಲ್ಲಿರುವ ಶಾಲಾ ವಿದ್ಯಾರ್ಥಿಗಳಿಗಾಗಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್​ (ಐಟಿಬಿಪಿ) ಸಿಬ್ಬಂದಿ ಸ್ಮಾರ್ಟ್ ಕ್ಲಾಸ್ ಆರಂಭಿಸಿದ್ದಾರೆ.

ಕೊಂಡಗಾಂವ್, ರೆಡ್​ ಝೋನ್​​ಗಳ ಪಟ್ಟಿಯಲ್ಲಿದೆ. ರಿಮೋಟ್​ ಗ್ರಾಮಗಳಲ್ಲಿನ ಮಕ್ಕಳು ಇತ್ತ ಶಾಲೆಯೂ ಪ್ರಾರಂಭವಾಗದೇ, ಅತ್ತ ಆನ್​ಲೈನ್​ ತರಗತಿಗಳಿಂದಲೂ ವಂಚಿತರಾಗಿದ್ದಾರೆ. ಹೀಗಾಗಿ, ಐಟಿಬಿಪಿಯ 41ನೇ ಬೆಟಾಲಿಯನ್ ಸಿಬ್ಬಂದಿ ಇಂಟರ್ನೆಟ್ ಆಧಾರಿತ ತರಗತಿಗಳನ್ನು ಆಯೋಜಿಸಿದೆ.

ಇದನ್ನೂ ಓದಿ: ವಾಘಾ-ಅಟ್ಟಾರಿ ಗಡಿಯಲ್ಲಿ ಈ ಬಾರಿಯ ಬೀಟಿಂಗ್ ರಿಟ್ರೀಟ್ ರದ್ದು

ಕಂಪ್ಯೂಟರ್‌ಗಳು ಮತ್ತು ಪ್ರೊಜೆಕ್ಟರ್‌ಗಳಂತಹ ಎಲೆಕ್ಟ್ರಾನಿಕ್ ಉಪಕರಣಗಳ ಸಹಾಯದಿಂದ ಪದವೀಧರ ಐಟಿಬಿಪಿ ಸಿಬ್ಬಂದಿ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಯೂಟ್ಯೂಬ್ ಮತ್ತು ಇ-ಲರ್ನಿಂಗ್ ವೆಬ್‌ಸೈಟ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಸಾಕಷ್ಟು ಕಲಿಯಲು ಅವಕಾಶ ಮಾಡಿಕೊಡುತ್ತಿದ್ದಾರೆ. ಸುಮಾರು 50 ವಿದ್ಯಾರ್ಥಿಗಳು ಇದರ ಸಹಾಯ ಪಡೆದುಕೊಂಡಿದ್ದಾರೆ.

ABOUT THE AUTHOR

...view details