ನವದೆಹಲಿ: ಭಾರತದೊಂದಿಗೆ ಅಂತಾರಾಷ್ಟ್ರೀಯ ಸೌರ ಒಕ್ಕೂಟದ (ಐಎಸ್ಎ) ಚೌಕಟ್ಟಿನ ಒಪ್ಪಂದಕ್ಕೆ ಇಟಲಿ ಬುಧವಾರ ಸಹಿ ಹಾಕಿದೆ ಎಂದು ವಿದೇಶಾಂಗ ಸಚಿವಾಲಯದ (ಎಂಇಎ) ವಕ್ತಾರ ಅನುರಾಗ್ ಶ್ರೀವಾಸ್ತವ ಮಾಹಿತಿ ನೀಡಿದ್ದಾರೆ.
"ಐಎಸ್ಎಯ ಚೌಕಟ್ಟಿನ ಒಪ್ಪಂದದ ತಿದ್ದುಪಡಿಗಳು 20 ಜನವರಿ 2021 ರಂದು ಜಾರಿಗೆ ಬಂದ ನಂತರ ಇಟಲಿಯ ಗಣರಾಜ್ಯವು ಅಂತಾರಾಷ್ಟ್ರೀಯ ಸೌರ ಒಕ್ಕೂಟದ (ಐಎಸ್ಎ) ಚೌಕಟ್ಟಿನ ಒಪ್ಪಂದಕ್ಕೆ ಸಹಿ ಹಾಕಿತು. ಯುಎನ್ನ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ತನ್ನ ಸದಸ್ಯತ್ವ ತೆರೆಯಿತು" ಎಂದು ಶ್ರೀವಾಸ್ತವ ಟ್ವೀಟ್ ಮಾಡಿದ್ದಾರೆ.
ಒಪ್ಪಂದದ ಸಹಿ ಮಾಡಿದ ಪ್ರತಿಗಳನ್ನು ಹೆಚ್ಚುವರಿ ಕಾರ್ಯದರ್ಶಿ (ಇಆರ್), ಐಎಸ್‌ಎ ಫ್ರೇಮ್‌ವರ್ಕ್ ಒಪ್ಪಂದದ ಠೇವಣಿಯಾಗಿರುವ ಎಂಇಎ ಪ್ರತಿನಿಧಿಯಾಗಿ ಸ್ವೀಕರಿಸಿದ್ದಾರೆ.